ಪ್ರತಿಭಟನೆ ವೇಳೆ ಹಠಾತ್ ಸಾವು

7

ಪ್ರತಿಭಟನೆ ವೇಳೆ ಹಠಾತ್ ಸಾವು

Published:
Updated:

ಗೌರಿಬಿದನೂರು: ತಾಲ್ಲೂಕಿನ ಕಾದಲವೇಣಿಯ ನಿವೇಶನ ರಹಿತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಗಂಗಾಧರಪ್ಪ (50) ಎಂಬುವರು ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಕಾದಲವೇಣಿ ಗ್ರಾಮದ ಹೊರವಲಯದಲ್ಲಿ ನಿವೇಶನ ರಹಿತರು ಹಾಕಿಕೊಂಡಿದ್ದ ಗುಡಿಸಲುಗಳನ್ನು ತಹಶೀಲ್ದಾರ್ ಆರ್.ನಾಗರಾಜ ಶೆಟ್ಟಿ ಗುರುವಾರ ತೆರವುಗೊಳಿಸಿದ್ದರು. ನಂತರ ಅಲ್ಲಿನ ನಿವಾಸಿಗಳು ತಾಲ್ಲೂಕು ಕಚೇರಿ ಮುಂಭಾಗ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು. ಗಂಗಾಧಪ್ಪ ಗುರುವಾರ ರಾತ್ರಿ ಪ್ರತಿಭಟನೆ ಸ್ಥಳದಲ್ಲಿ ಮಲಗಿದ್ದರು. ಶುಕ್ರವಾರ ಬೆಳಿಗ್ಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry