ಶುಕ್ರವಾರ, ನವೆಂಬರ್ 15, 2019
22 °C
ಪಂಚರಂಗಿ

ಪ್ರತಿಭಾವಂತ ನಿರ್ದೇಶಕರೊಂದಿಗೆ ಕೆಲಸ ಮಾಡುವ ಅದೃಷ್ಟ

Published:
Updated:

ರಾಜ್‌ಕುಮಾರ್ ಹಿರಾನಿ ನಿರ್ದೇಶಿಸುತ್ತಿರುವ ಚಿತ್ರವೊಂದರಲ್ಲಿ ಇದೇ ಮೊದಲ ಬಾರಿಗೆ ಅನುಷ್ಕಾ ಶರ್ಮ ನಟಿಸುತ್ತಿದ್ದಾರೆ.ಅಮೀರ್‌ಖಾನ್ ಅವರೊಂದಿಗೆ ನಟಿಸುತ್ತಿರುವ `ಪೀಕೇ' ಎಂಬ ಈ ಚಿತ್ರದಲ್ಲಿ ಅವಕಾಶ ದೊರೆತಿರುವುದು ತಮ್ಮ ಪಾಲಿನ ಅದೃಷ್ಟ ಎಂದು ಸ್ವತಃ ಅನುಷ್ಕಾ ನುಡಿದಿದ್ದಾರೆ.`ಪೀಕೇ' ಚಿತ್ರೀಕರಣದ ಪ್ರತಿಯೊಂದು ಕ್ಷಣವನ್ನೂ ನಾನು ಅನುಭವಿಸಿದೆ. ಸಿನಿಮಾಕ್ಕಾಗಿ ರಾಜ್‌ಕುಮಾರ್ ಹಿರಾನಿ ಅವರಿಗಿರುವ ತುಡಿತ ನಿಜಕ್ಕೂ ನನ್ನೊಳಗಿನ ನಟನೆಯನ್ನು ಪ್ರೇರೇಪಿಸಿತು. ನನ್ನ ಸಿನಿಮಾ ವೃತ್ತಿ ಜೀವನದ ಆರಂಭದಲ್ಲೇ ಒಂದಿಷ್ಟು ಉತ್ತಮ ಕೆಲಸ ಮಾಡಿದ್ದರೆ ಇಂಥ ಅತ್ಯುತ್ತಮ ನಿರ್ದೇಶಕರು ನನಗೆ  ಮೊದಲೇ ದೊರೆಯುತ್ತಿದ್ದರು' ಎಂದು ಅನುಷ್ಕಾ ಮುಕ್ತಕಂಠದಿಂದ ಹೊಗಳಿದ್ದಾರೆ.

ಪ್ರತಿಕ್ರಿಯಿಸಿ (+)