ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

7

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

Published:
Updated:

ಔರಾದ್‌: ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಸೋಮವಾರ ಇಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು, ನಿವೃತ್ತ ಶಿಕ್ಷಕರು ಮತ್ತು ಸೇವಾವಧಿಯಲ್ಲಿ ಮೃತರಾದ ಶಿಕ್ಷಕರ ಅವಲಂಬಿತರಿಗೆ ಸನ್ಮಾನಿಸಿ ಗೌರವಿಸಲಾಯಿತು.ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲಿ್ಲ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ರೂ. 11 ಸಾವಿರ, ದ್ವೀತಿಯ ಸ್ಥಾನ ಪಡೆದ ವಿದ್ಯಾರ್ಥಿಗೆ ರೂ. 5 ಸಾವಿರ ನಗದು ಬಹುಮಾನವನ್ನು ಶಾಸಕ ಪ್ರಭು ಚವ್ಹಾಣ್‌ ನೀಡಿದರು. ಮತ್ತು ಶೇ. 80 ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಾಲು ಹೊಸಿದಿ ಗೌರವಿಸಲಾಯಿತು.ಪ್ರಸಕ್ತ ಸಾಲಿನಲ್ಲಿ ಶೇ. 95 ಮೇಲ್ಪಟು್ಟ  ಅಂಕ ಪಡೆದ ವಿದಾ್ಯರ್ಥಿಗಳಿಗೆ ಮತ್ತು ಆ ಶಾಲೆ ಮುಖ್ಯಗುರುಗಳಿಗೆ ರೂ. 21 ಸಾವಿರ ಬಹುಮಾನ ನೀಡುವುದಾಗಿ ಶಾಸಕರು ಪ್ರಕಟಿಸಿದರು. ತಾಲ್ಲೂಕಿನ ಶಿಕ್ಷಣ ಗುಣಮಟ್ಟ ಸುಧಾರಣೆಗೆ ಎಲ್ಲ ರೀತಿಯಿಂದ ಸಹಕರಿಸುವುದಾಗಿ ಹೇಳಿ­ದರು. ಸಾನಿಧ್ಯ ವಹಿಸಿದ ಬೀದರ್‌ ಬಸವ ಸೇವಾ ಪ್ರತಿಷಾ್ಠನದ ಅಕ್ಕ ಅನ್ನಪೂರ್ಣ,  ಅಂಕ ಗಳಿಸುವುದೇ ಶಿಕ್ಷಣದ ಗುರಿಯಾಗಬಾರದು.

ಮಕ್ಕಳಲ್ಲಿ ಪರೋ­ಪ­ಕಾರ ಗುಣಬಿತ್ತುವಂತಹ ನೈತಿಕ ಶಿಕ್ಷಣ ನೀಡಬೇಕಾಗಿದೆ ಎಂದು ಹೇಳಿದರು. ತಾಪಂ. ಅಧ್ಯಕ್ಷ ರಾಜಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಪಂ. ಸದಸ್ಯ ಕಾಶಿನಾಥ ಜಾಧವ್, ತಾಪಂ. ಸದಸ್ಯ ವಿನಾಯಕ ಜಗದಾಳೆ, ಶರಣಪ್ಪ ಪಂಚಾಕ್ಷಿರೆ, ಪ್ರಕಾಶ ಅಲಾ್ಮಜೆ, ನೌಕರ ಸಂಘದ ತಾಲ್ಲೂಕು ಅಧ್ಯಕ್ಷ ಶಿವಾಜಿ ಚಿಟಗಿರೆ, ಶಿವಾಜಿರಾವ ನರೋಟೆ, ಶಿವಾಜಿರಾವ ಪಾಟೀಲ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೆಶಕ ಎಚ್‌. ಆರ್‌. ಬಸಪ್ಪ, ಡಯಟ್‌ ಪಾ್ರಂಶುಪಾಲ ಬಸವರಾಜ ಗೌನಳಿ್ಳ, ಧನರಾಜ ಗುಡಮೆ, ಮುಖಾ್ಯಧಿಕಾರಿ ಮಲ್ಲಿಕಾರ್ಜುನ ಕರಂಜೆ ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ ಸಾ್ವಮಿ ಸ್ವಾಗತಿಸಿದರು. ಸೂರ್ಯಕಾಂತ ಸಿರಂಜೆ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry