ಪ್ರತಿಭಾ ಅನಾವರಣ

7

ಪ್ರತಿಭಾ ಅನಾವರಣ

Published:
Updated:

ಅಂದು ಕಾಲೇಜಿನ ಕ್ಯಾಂಪಸ್‌ನಲ್ಲಿ ವಿಶೇಷ ಮೆರುಗು ಆವರಿಸಿತ್ತು. ತಮ್ಮ ಕಾಲೇಜಿನ ಸಾಂಸ್ಕೃತಿಕ ಉತ್ಸವದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ಪರಿಯೂ ಅಚ್ಚರಿ ಮೂಡಿಸಿತ್ತು. ಇದು ಪಿಇಎಸ್‌ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ವಾರ್ಷಿಕ ಸಾಂಸ್ಕೃತಿಕ ಹಬ್ಬದ ಚಿತ್ರಣ. ಬಹು ಬಗೆಯ ಪ್ರತಿಭಾ ಪ್ರದರ್ಶನಕ್ಕೆ ಸಜ್ಜಾಗಿದ್ದ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ ಒದಗಿಸಿಕೊಟ್ಟಿತ್ತು ಕಾಲೇಜು.ಸಾಂಸ್ಕೃತಿಕ ಹಬ್ಬಕ್ಕೆ ಮುನ್ನುಡಿ ಬರೆದ ಪಿಯುಸಿ ವಿದ್ಯಾರ್ಥಿನಿ ಶಕ್ತಿ ಶ್ರೀದೇವಿ ತಮ್ಮ ನೃತ್ಯದಿಂದ ಪ್ರೇಕ್ಷಕರನ್ನು ಭಾವಪರವಶಗೊಳಿಸಿದ್ದರು. ಆಕೆಯ ನೃತ್ಯದ ಮೋಡಿಗೆ ಚಪ್ಪಾಳೆಯ ಸುರಿಮಳೆ ಸಿಕ್ಕಿತು. ಇದಾದ ನಂತರ  ವೇದಿಕೆಯೇರಿದ್ದು ಸಂಸ್ಕೃತಿ ಮತ್ತು ತಂಡ. ಭಾರತೀಯ ಸಮಕಾಲೀನ ಬ್ಯಾಲೆ ನೃತ್ಯ ‘ಸ್ಪೆಲ್‌ಬೌಂಡ್‌’ ತಂಡ ತನ್ನ ಚಮತ್ಕಾರವನ್ನು ಅಲ್ಲಿ ತೋರಿತ್ತು.

ಕಣ್ಣು ಕದಲಿಸದಂತೆ ಮಾಡಿದ್ದ ನೃತ್ಯವಂತೂ ಎಲ್ಲರಲ್ಲೂ ಮೆಚ್ಚುಗೆ ಮೂಡಿಸಿತ್ತು. ತುಂಬಿದ ಕರತಾಡನದಿಂದ ಸಂತೋಷಗೊಂಡ ವಿದ್ಯಾರ್ಥಿನಿ ಸಂಸ್ಕೃತಿ ತಮ್ಮ ನೃತ್ಯಾಭ್ಯಾಸದ ಕುರಿತೂ ಅಲ್ಲಿ ಮಾತನಾಡಿದರು. ‘ನಮ್ಮ ನೃತ್ಯವನ್ನು ಎಲ್ಲರೂ ಇಷ್ಟಪಟ್ಟಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಇದಕ್ಕಾಗಿ ಹೆಚ್ಚು ಸಮಯ ಮತ್ತು ಶ್ರಮ ಮೀಸಲಿಟ್ಟಿದ್ದೆವು. ಇಂಥ ಸ್ಪಂದನ  ದೊರೆತಿರುವುದು ಖುಷಿ ಕೊಟ್ಟಿದೆ’ ಎಂದು ಹೇಳಿಕೊಂಡರು.

 ‘ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ನಾವು ಒಂದೊಂದು ಕೆಲಸವನ್ನು ಒಂದೊಂದು ಗುಂಪುಗಳಿಗೆ ವಹಿಸಿಕೊಂಡೆವು. ಯಶಸ್ಸು ಗಳಿಸುವುದಷ್ಟೇ ನಮ್ಮೆಲ್ಲರ ಗುರಿಯಾಗಿತ್ತು. ಈ ಕಾರ್ಯಕ್ರಮಕ್ಕೂ ಮುನ್ನ ಸಾಕಷ್ಟು ಪೂರ್ವಭಾವಿ ತರಬೇತಿ ಮಾಡಿಕೊಂಡಿದ್ದೆವು’ ಎಂದು ಅಮೃತಾ ನೆನಪಿಸಿಕೊಂಡರು. ವಿದ್ಯಾರ್ಥಿನಿಯರಾದ ಹರ್ಷಿತಾ, ಮನಿಷಾ, ಲಾವಣ್ಯ ಅವರ ನವಿಲು ನೃತ್ಯದೊಂದಿಗೆ ಕಾರ್ಯಕ್ರಮ ತೆರೆಕಂಡಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry