ಪ್ರತಿಭಾ ಕಾರಂಜಿ: ರಾಜ್ಯಮಟ್ಟಕ್ಕೆ ಆಯ್ಕೆ

7

ಪ್ರತಿಭಾ ಕಾರಂಜಿ: ರಾಜ್ಯಮಟ್ಟಕ್ಕೆ ಆಯ್ಕೆ

Published:
Updated:

ಯಾದಗಿರಿ: ನಗರದಲ್ಲಿ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ ಸ್ಥಾನ ಪಡೆದ ಜಿಲ್ಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ.ಜ.22ರಿಂದ 24ರ ವರೆಗೆ ವಿಜಾಪುರದ ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಂ. ಪಾಟೀಲ್ ಪಬ್ಲಿಕ್ ಶಾಲೆಯ ಆವರಣದಲ್ಲಿ ನಡೆಯುವ ರಾಜ್ಯ­ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಈ ಮಕ್ಕಳು ತಮ್ಮ ಇತ್ತೀಚಿನ ಎರಡು ಭಾವಚಿತ್ರಗಳೊಂದಿಗೆ ಭಾಗವಹಿಸ­ಬೇಕು. ಏಪ್ರಿಲ್‌ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ಒಬ್ಬ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಗುತ್ತಿದ್ದು, ಈ ವಿದ್ಯಾರ್ಥಿ­ಗಳು ವಿಜಾಪುರದಲ್ಲಿ ಹಾಜರಿರಬೇಕು ಎಂದು ಎಂ. ನಾಸಿರುದ್ದೀನ್ ಮತ್ತು ನೋಡಲ್ ಅಧಿಕಾರಿ ಬಿ.ವೆಂಕೋಬ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನೋಡಲ್ ಅಧಿಕಾರಿಗಳನ್ನು (94490­72723) ಸಂಪರ್ಕಿಸಬಹು­ದಾಗಿದೆ.ವಿಜೇತ ವಿದ್ಯಾರ್ಥಿಗಳ ವಿವರ

ವೈಯಕ್ತಿಕ ವಿಭಾಗ: ಭಾಷಣ (ಕನ್ನಡ)– ವೆಂಕಟೇಶ (ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೆಂಭಾವಿ), ಭಾಷಣ (ಇಂಗ್ಲಿಷ್)– ತರನುಮ್‌ ಸಬಾ (ಹೇಮರೆಡ್ಡಿ ಮಲ್ಲಮ್ಮ ಪ್ರೌಢ ಶಾಲೆ ಕೆಂಭಾವಿ), ಭಾಷಣ (ಹಿಂದಿ)–  ಸೈಯದ್ ಯೂಸಫ್ (ಶಾಂತವೀರ ಪ್ರೌಢ ಶಾಲೆ ಗುರುಮಠಕಲ್), ಭಾಷಣ (ಸಂಸ್ಕೃತ)– (ಹೇಮಾವತಿ ಸರ್ಕಾರಿ ಪ್ರೌಢ ಶಾಲೆ (ಕನ್ಯಾ), ಗೋಗಿ), ಭಾಷಣ (ಉರ್ದು)– ಸೈಯ್ಯದ ಆಯೇಷಾ (ಮಹಾತ್ಮ ಗಾಂಧಿ ಉರ್ದು ಪ್ರೌಢ ಶಾಲೆ ಯಾದಗಿರಿ). ಭಾಷಣ (ಮರಾಠಿ)– ಸವಿತಾ (ಸರ್ಕಾರಿ ಪ್ರೌಢ ಶಾಲೆ (ಕನ್ಯಾ), ಗೋಗಿ), ಭಾಷಣ (ತೆಲಗು)– ಶಾಲಿನಿ (ಸರ್ಕಾರಿ ಪ್ರೌಢ ಶಾಲೆ (ಕನ್ಯಾ), ಗೋಗಿ), ಭಾಷಣ (ತಮಿಳು)– ಶಾಲಿನಿ (ಸರ್ಕಾರಿ ಪ್ರೌಢಶಾಲೆ (ಕನ್ಯಾ), ಗೋಗಿ), ಧಾರ್ಮಿಕ ಪಠಣ (ಸಂಸ್ಕೃತ)– ಪ್ರತಿಭಾ (ಸರ್ಕಾರಿ ಪದವಿಪೂರ್ವ ಕಾಲೇಜು (ಕನ್ಯಾ), ಶಹಾಪುರ), ಧಾರ್ಮಿಕ ಪಠಣ (ಅರೇಬಿಕ್)– ಉಮೆ ಅಫ್ಶೀನ್ (ಸರ್ಕಾರಿ ಪದವಿಪೂರ್ವ ಕಾಲೇಜು (ಬಾಲಕಿಯರ), ಸುರಪುರ), ಯೋಗಾಸನ– ಅರವಿಂದ (ಸರ್ಕಾರಿ ಪದವಿಪೂರ್ವ ಕಾಲೇಜು (ಬಾಲಕರ), ಶಹಾಪುರ), ಕರ್ನಾಟಕ ಶಾಸ್ತ್ರೀಯ ಸಂಗೀತ– ರಕ್ಷಿತಾ (ಸರ್ಕಾರಿ ಪ್ರೌಢಶಾಲೆ (ಕನ್ಯಾ), ಕೆಂಭಾವಿ),  ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ– ಶ್ರೀದೇವಿ (ಆದರ್ಶ ಪ್ರೌಢಶಾಲೆ, ಶಹಾಪುರ), ಜಾನಪದ ಗೀತೆ– ಭಾಗ್ಯಶ್ರೀ (ಸರ್ಕಾರಿ ಪ್ರೌಢಶಾಲೆ (ಕನ್ಯಾ), ಗೋಗಿ),  ಭಾವಗೀತೆ– ಶಂಕ್ರಮ್ಮ (ಸರ್ಕಾರಿ ಪ್ರೌಢ ಶಾಲೆ, ರಾಜನ್ ಕೊಳೂರ್), ಭರತ ನಾಟ್ಯ– ಬಸವಂತಿ (ಸರ್ಕಾರಿ ಪ್ರೌಢಶಾಲೆ, ಮದ್ರಿಕಿ), ಛದ್ಮ ವೇಷ (ಫ್ಯಾನ್ಸಿ ಡ್ರೆಸ್)– ರಾಹುಲ್ (ಸರ್ಕಾರಿ ಪ್ರೌಢಶಾಲೆ, ರುಕ್ಮಾಪುರ), ಕ್ಲೇ ಮಾಡಲಿಂಗ್– ಶಿವರಾಜ (ಸರ್ಕಾರಿ ಪ್ರೌಢ ಶಾಲೆ. ಹೊಸಕೇರಾ), ಆಶುಭಾಷಣ– ರತ್ನ ಈರಣ್ಣ  (ಜಾನಕಿದೇವಿ ಪ್ರೌಢ ಶಾಲೆ, ಸುರಪುರ), ಮಿಮಿಕ್ರಿ–  ಶ್ರವಣ ಕುಮಾರ (ಫ್ರಂಟ್‌ಲೈನ್‌ ಪ್ರೌಢ ಶಾಲೆ, ಗುರುಮಠಕಲ್), ಪ್ರಬಂಧ ರಚನೆ– ಶ್ರೀಶೈಲ ಶೇಷಗಿರಿ (ಪ್ರಿಯ­ದರ್ಶಿನಿ ಪ್ರೌಢಶಾಲೆ, ರಂಗಂಪೇಟೆ), ಚರ್ಚಾ ಸ್ಪರ್ಧೆ– ರತ್ನ ಈರಣ್ಣ (ಜಾನಕಿದೇವಿ ಪ್ರೌಢಶಾಲೆ, ಸುರಪುರ), ಚಿತ್ರಕಲೆ– ಮೌನೇಶ್ವರ ಸರ್ಕಾರಿ ಪ್ರೌಢಶಾಲೆ, ಬಾಚಿಮಟ್ಟಿ), ರಂಗೋಲಿ– ಶೀತಲ್ ಎಸ್. (ಸರ್ಕಾರಿ ಪ್ರೌಢಶಾಲೆ (ಕನ್ಯಾ), ಕೆಂಭಾವಿ), ಗಝಲ್– ಅಸ್ಮಾ ಅಫ್ರೀನ್(ಸರ್ಕಾರಿ ಪದವಿ ಪೂರ್ವ ಕಾಲೇಜು, ರಂಗಂಪೇಟೆ), 

ಸಾಮೂಹಿಕ ವಿಭಾಗ: ನಾಟಕ– ಸುಜಾತ ಮತ್ತು ಸಂಗಡಿಗರು (ಸರ್ಕಾರಿ ಪ್ರೌಢಶಾಲೆ, ಯಲ್ಹೇರಿ), ರಸಪ್ರಶ್ನೆ – ಯಲ್ಲಾಲಿಂಗ ಮತ್ತು ಸಂಗಡಿಗರು (ಸರ್ವೋದಯ ಪ್ರೌಢಶಾಲೆ, ಯರಗೋಳ), ಕವ್ವಾಲಿ– ಸನಾ ಮತ್ತು ಸಂಗಡಿಗರು (ಸರ್ಕಾರಿ ಪ್ರೌಢಶಾಲೆ, ಸ್ಟೇಶನ್ ಬಜಾರ್‌ ಯಾದಗಿರಿ), ಜಾನಪದ ನೃತ್ಯ– ರಶ್ಮಿ ಮತ್ತು ಸಂಗಡಿಗರು (ಸರ್ಕಾರಿ ಕನ್ಯಾ ಪ್ರೌಢಶಾಲೆ, ಗೋಗಿ), ಕೋಲಾಟ– ತೃಪ್ತಿ ಮತ್ತು ಸಂಗಡಿಗರು (ಸರ್ಕಾರಿ ಕನ್ಯಾ ಪ್ರೌಢಶಾಲೆ, ಗೋಗಿ), ಸ್ಥಳದಲ್ಲಿ ವಿಜ್ಞಾನದ ಮಾದರಿ ತಯಾರಿಕೆ– ಶೋಯಬ್ ಮತ್ತು ನೂರುದ್ದೀನ್‌ (ಸಭಾ ಗ್ರಾಮೀಣ ಪ್ರೌಢಶಾಲೆ, ಯಾದಗಿರಿ), ಸಕಾಲ ಚಿತ್ರಕಲೆ– ಗಣೇಶ ಹರಸಿಂಗ್ (ಸರ್ಕಾರಿ ಪ್ರೌಢಶಾಲೆ ರಾಜನಕೋಳೂರು), ಸಕಾಲ ನಾಟಕ– ವಿಜಯಲಕ್ಷ್ಮೀ ಹಾಗೂ ಸಂಗಡಿಗರು (ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ರಾಜನಕೋಳೂರು).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry