ಪ್ರತಿಭಾ ಪುರಸ್ಕಾರ

7

ಪ್ರತಿಭಾ ಪುರಸ್ಕಾರ

Published:
Updated:

ಹೊಸಕೋಟೆ: ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕವು ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಹಾಗು ಪಿಯುಸಿ ಪರೀಕ್ಷೆಗಳಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಾಲ್ಲೂಕಿನ ವಿದ್ಯಾರ್ಥಿಗಳನ್ನು ಪುರಸ್ಕರಿಸಲಿದೆ.ಅರ್ಹ ವಿದ್ಯಾರ್ಥಿಗಳು ಈ ತಿಂಗಳ 15ರೊಳಗೆ ಮೊಬೈಲ್:  9480502369/ 7760648537 ಸಂಪರ್ಕಿಸಿ ಹೆಸರು ನೋಂದಾಯಿಸುವಂತೆ ಪರಿಷತ್ತಿನ ಅಧ್ಯಕ್ಷ ಕೆ.ವಿ.ಶ್ರೀಕಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಎನ್‌ಎಸ್‌ಎಸ್ ಶಿಬಿರ: ವಿದ್ಯಾರ್ಥಿಗಳು ಜೀವನದಲ್ಲಿ ಸೇವಾ ಮನೋಭಾವನೆಯನ್ನು ಬೆಳಸಿಕೊಂಡು ಸಮಾಜಕ್ಕೆ ನೆರವಾಗುವಂತೆ ಖಾಜಿಹೊಸಹಳ್ಳಿ ಗ್ರಾ.ಪಂ.ಅಧ್ಯಕ್ಷ ಚಂದ್ರಶೇಖರ್ ಹೇಳಿದರು. ಹೊಸಕೋಟೆಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಖಾಜಿಹೊಸಹಳ್ಳಿ ಗ್ರಾಮದಲ್ಲಿ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಶಿಬಿರಾಧಿಕಾರಿ ಮಾಂತೇಶ್ 7 ದಿನಗಳಲ್ಲಿ  ಜನಜಾಗೃತಿ ನಡೆಸಲಾಗುವುದು ಎಂದರು. ಗ್ರಾ.ಪಂ. ಉಪಾಧ್ಯಕ್ಷ ಬಿ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರುದ್ರಾರಾಧ್ಯ, ಗ್ರಾ.ಪಂ.ಅಧಿಕಾರಿ ಎನ್.ವೈ.ಶ್ರೆನಿವಾಸಮೂರ್ತಿ,ಉಪನ್ಯಾಸಕರಾದ ರಾಜು, ಬಿ.ವಿ.ರಮೇಶ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry