ಮಂಗಳವಾರ, ನವೆಂಬರ್ 19, 2019
28 °C

`ಪ್ರತಿಭೆಯ ಜತೆಗೆ ಶ್ರಧೆಯೂ ಬೇಕು'

Published:
Updated:

ಬೆಂಗಳೂರು:  `ಪ್ರತಿಭೆಯ ಜತೆಗೆ ಶ್ರದ್ಧೆಯೂ ಬೇಕು. ರಂಗಭೂಮಿಯಲ್ಲಿ ದುಡಿಯುವ ನಿಷ್ಠೆ ಬೇಕು. ಆಗ ಮಾತ್ರ ರಂಗಭೂಮಿಯಲ್ಲಿ ಯಶಸ್ವಿಯಾಗಲು ಸಾಧ್ಯ' ಎಂದು ಸಾಹಿತಿ ಕೆ. ಮರುಳಸಿದ್ದಪ್ಪ ಹೇಳಿದರು.ಪ್ರಸಂಗ ತಂಡವು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ `ಅನಭಿಜ್ಞ ಶಾಕುಂತಲ' ನಾಟಕದ 26 ನೇ ಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಶ್ರೇಷ್ಠ ನಾಟಕಗಳು ಅಥವಾ ರಂಗಕೃತಿಗಳು ಎಲ್ಲವೂ, ಎಲ್ಲಾ ಕಾಲದಲ್ಲಿಯೂ ಯಶಸ್ವಿಯಾಗುವುದಿಲ್ಲ. ನೂತನವಾದ ರಂಗ ಪ್ರಯೋಗಗಳು ಮಾತ್ರ ಯಶಸ್ವಿಯಾಗಲು ಸಾಧ್ಯವಾಗುತ್ತದೆ. `ಅನಭಿಜ್ಞ ಶಾಕುಂತಲ' ನಾಟಕವು ಅಂತಹ ಅಪೂರ್ವವಾದ ರಂಗ ಪ್ರಯೋಗವಾಗಿದೆ' ಎಂದರು.`ಈ ನಾಟಕವು 25 ಪ್ರದರ್ಶನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಇದು 26 ನೇ ಪ್ರದರ್ಶನವಾಗಿದೆ. ಕಾವ್ಯಾತ್ಮಕವಾದ ಭಾಷೆಯನ್ನು ವಿನೂತನವಾಗಿ ರಂಗಪ್ರಯೋಗದಲ್ಲಿ ತರುವುದು ಅಷ್ಟು ಸುಲಭವಾಗಿಲ್ಲ. ಆದರೆ, ಇಂತಹ ವಿನೂತನವಾದ ಪ್ರಯೋಗವನ್ನು ಈ ನಾಟಕ ಕೃತಿಯು ಮಾಡಿದೆ' ಎಂದು ಪ್ರಶಂಸಿಸಿದರು.`ಅನಭಿಜ್ಞ ಶಾಕುಂತಲ' ಮತ್ತು ಈಗ ನಡೆಯುತ್ತಿರುವ 9 ಗಂಟೆಯ ಪ್ರದರ್ಶನದ `ಮಲೆಗಳಲ್ಲಿ ಮದುಮಗಳು' ನಾಟಕ ಪ್ರದರ್ಶನವು ಇಂದಿನ ರಂಗಭೂಮಿ ಅವಸಾನದ ಅಂಚಿನಲ್ಲಿದೆ ಎಂಬ ಮಾತನ್ನು ಸುಳ್ಳು ಮಾಡಿವೆ. ಇಂತಹ ರಂಗಪ್ರಯೋಗಗಳು ರಂಗಭೂಮಿಗೆ ಹೊಸ ಚೇತನವನ್ನು ನೀಡಿವೆ' ಎಂದರು. ಶಾಸಕ ಅಶ್ವತ್ಥ ನಾರಾಯಣ, `ಇಂದು ದೃಶ್ಯ ಮಾಧ್ಯಮ ಮತ್ತು ಸಿನಿಮಾಗಳ ಹಾವಳಿ ನಡುವೆಯೂ ಒಂದು ನಾಟಕ ಯಶಸ್ವಿಯಾಗಿದೆ. ರಂಗಭೂಮಿಯು ಹೊಸ ಪ್ರಯೋಗಗಳಿಗೆ ಸಾಕ್ಷಿಯಾಗಿದೆ' ಎಂದರು.

ಪ್ರತಿಕ್ರಿಯಿಸಿ (+)