`ಪ್ರತಿಭೆ ಅರಳಲು ಪ್ರೋತ್ಸಾಹ ಅಗತ್ಯ'

7

`ಪ್ರತಿಭೆ ಅರಳಲು ಪ್ರೋತ್ಸಾಹ ಅಗತ್ಯ'

Published:
Updated:

ನರಗುಂದ: ಪ್ರತಿಯೊಂದು ಮಗುವಿನಲ್ಲಿ  ಒಂದಿಲ್ಲೊಂದು ರೀತಿಯಲ್ಲಿ ಪ್ರತಿಭೆ ಇದ್ದೇ ಇರುತ್ತದೆ. ಅದನ್ನು ಅರಳುವಂತೆ ಮಾಡಬೇಕಾಗಿದೆ. ಅರಳಬೇಕಾದರೆ ಮುಖ್ಯವಾಗಿ ಪ್ರೋತ್ಸಾಹ ಅಗತ್ಯವಾಗಿದೆ ಎಂದು  ಜಿ.ಪಂ ಸದಸ್ಯೆ ಶಾಂತಾ ದಂಡಿನ  ಹೇಳಿದರು.  ತಾಲ್ಲೂಕಿನ ಶಿರೊಳದ ಗುರುಬಸವ ಪ್ರೌಢ ಶಾಲೆಯಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಮಾತನಾಡಿದರು.ಇಂದಿನ ದಿನಗಳಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತ್ದ್ದಿದೇವೆ.  ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುವ ಮೂಲಕ ಈ ಕ್ಷೇತ್ರಕ್ಕೆ  ಹೊಸ ಮುನ್ನುಡಿ ಬರೆದಿದೆ. ಆದ್ದರಿಂದ ವಿದ್ಯಾರ್ಥಿಗಳು ಎಲ್ಲ ಸೌಲಭ್ಯ  ಗಳನ್ನು ಉಪಯೋಗಿಸಿಕೊಂಡು ಉನ್ನತ ವ್ಯಕ್ಯಿಗಳಾಗಿ ಹೊರಹೊಮ್ಮಬೇಕಾಗಿದೆ.  ಅದಕ್ಕೆ ಪಾಲಕರು, ಶಿಕ್ಷಕರು  ಸರಿಯಾದ ಮಾಗದರ್ಶನ ನೀಡಬೇಕೆಂದು ದಂಡಿನ ಸಲಹೆ ಮಾಡಿದರು.ಅತಿಥಿಗಳಾಗಿ ಉಪಸ್ಥಿತರಿದ್ದ ಅಮರೇಶ್ವರ ಶಿಕ್ಷಣ ಸಂಸ್ಥೆ ಸದಸ್ಯ ಟ.ಬಿ.ಕಲ್ಲೂರು ಮಾತನಾಡಿ, ಮಕ್ಕಳಿಗೆ ಅವರಲ್ಲಿರುವ ಕೌಶಲ್ಯ   ಹಾಗೂ ಜ್ಞಾನಕ್ಕನುಗುಣವಾಗಿ   ಸಂಪನ್ಮೂಲ ಒದಗಿಸಿ ಎಲ್ಲ ಚಟುವಟಿಕೆಗಳಲ್ಲಿ ಪ್ರತಿಭಾವಂತರನ್ನಾಗಿ ಮಾಡಬೇಕಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ  ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ ಮಾತನಾಡಿ, ಸರಕಾರವು ಶಿಕ್ಷಣ ಕ್ಷೇತ್ರಕೆ ಸಾಕಷ್ಟು ಅನುದಾನ ನೀಡುತ್ತಿದೆ. ಆದರ ಸದುಪಯೋಗವಾಗಬೇಕು  ಎಂದರು. ಅಧ್ಯಕ್ಷತೆ ವಹಿಸಿದ್ದ ಜೆಟಿ ವಿದ್ಯಾಪೀಠದ ಸ್ಥಾನಿಕ ಮಂಡಳಿ ಸದಸ್ಯ  ವಿ.ಕೆ.ಮರೆಗುದ್ದಿ ಮಾತನಾಡಿ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದರು.ಸಮಾರಂಭದಲ್ಲಿ ತಾ.ಪಂ ಸದಸ್ಯ ವಿ.ಎನ್.ಕೊಳ್ಳಿಯವರ, ಶಿರೋಳ ಗ್ರಾಪಂ ಅಧ್ಯಕ್ಷೆ  ಬಿ.ಸಿ.ವಸ್ತ್ರದ, ಉಪಾಧ್ಯಕ್ಷೆ ಕೆ.ಬಿ.ಚಂಗಳಿ, ನಾಗನಗೌಡ ತಮ್ಮನಗೌಡ್ರ, ಎಸ್.ಎಂ.ಉಕ್ಕಲಿ, ಪಿ.ಎಫ್.ಸೊಲಾಪುರಿ, ಬಿ.ಪಿ.ಶಿರಿಯಪ್ಪಗೌಡ್ರ, ಎಂ.ಎಂ. ಕೋಡಬಳಿ, ಜಗದೀಶ ವಸ್ತ್ರದ,  ಮುದಿವೀರಪ್ಪ ಕಲಾದಗಿ, ಕೆ.ಎಸ್.ಹಿರೇಮಠ, ಎಂ.ಎಸ್.ಹಟ್ಟಿ, ಬಿ.ಎಸ್.ಸಾಲಿಮಠ  ಸೇರಿದಂತೆ ಮೊದಲಾದವರಿದ್ದರು. ಆರ್.ಎಂ.ಕ್ಯಾಮನಗೌಡ್ರ ಸ್ವಾಗತಿಸಿದರು. ಶಾಂತಕುಮಾರ ಭಜಂತ್ರಿ ನಿರೂಪಿಸಿದರು.

ಕೆ.ಎಸ್.ಹಿರೇಮಠ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry