ಪ್ರತಿಭೆ ಕಿರಿಯರಿಗೆ ಸ್ಪೂರ್ತಿ

ಸೋಮವಾರ, ಜೂಲೈ 22, 2019
24 °C

ಪ್ರತಿಭೆ ಕಿರಿಯರಿಗೆ ಸ್ಪೂರ್ತಿ

Published:
Updated:

ಗೌರಿಬಿದನೂರು: `ಅತ್ಯುತ್ತಮ ಅಂಕ ಪಡೆದಿರುವ ವಿದ್ಯಾರ್ಥಿಗಳ ಪ್ರತಿಭೆ ಕಿರಿಯ ವಿದ್ಯಾರ್ಥಿಗಳಿಗೆ ಎಂದಿಗೂ ಸ್ಪೂರ್ತಿ. ಇದಕ್ಕೆ ಶ್ರಮ ಅಗತ್ಯ~ ಎಂದು ನ್ಯಾಷನಲ್ ಕಾಲೇಜು ಪ್ರಾಂಶುಪಾಲ ಕೆ.ಎಸ್.ಶಂಕರಪ್ಪ ಅಭಿಪ್ರಾಯ ಪಟ್ಟರು.ಪಟ್ಟಣದ ನ್ಯಾಷನಲ್ ಕಾಲೇಜಿನಲ್ಲಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯ ಕ್ರಮದಲ್ಲಿ ಮಾತನಾಡಿದರು.ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದೆ  ಶ್ರಮಪಟ್ಟು ವಿದ್ಯಾಭ್ಯಾಸ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು. ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀನಿವಾಸ್‌ಮೂರ್ತಿ ಮಾತನಾಡಿದರು.ತಾಲ್ಲೂಕಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು. ಉಪನ್ಯಾಸಕರಾದ  ಕೃಷ್ಣಮೂರ್ತಿ, ಟಿ.ಜಯ ರಾಮ್, ಚಂದ್ರಶೇಖರ್, ಸತ್ಯೇಂದ್ರ, ಆದಿಶೇಷ ರಾವ್, ಎಬಿವಿಪಿ ಜಿಲ್ಲಾ ಘಟಕದ ಕಾರ್ಯದರ್ಶಿ, ರಮೇಶ್‌ಗೌಡ, ಸಹ ಕಾರ್ಯದರ್ಶಿ ಮಂಜುನಾಥ್ ರೆಡ್ಡಿ,  ನಟ ಕೃಷ್ಣನಾಯ್ಡು, ಸ್ಟೆನ್‌ಲಿ, ಅಸ್ಕಿಲ್, ಎಬಿವಿಪಿ ಪದಾಧಿಕಾರಿಗಳಾದ ವಿಜಯ್ ಕುಮಾರ್, ಹರೀಶ್, ಮಂಜುನಾಥ್, ಇಮ್ರಾನ್, ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry