ಶನಿವಾರ, ಫೆಬ್ರವರಿ 27, 2021
28 °C

ಪ್ರತಿಭೆ ಬೇಡುವ ಚಿತ್ರರಂಗ– ಅದಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರತಿಭೆ ಬೇಡುವ ಚಿತ್ರರಂಗ– ಅದಿತಿ

ಚಿತ್ರರಂಗದಲ್ಲಿ ಪ್ರತಿಭೆಯೊಂದೇ ಮುಖ್ಯವಾಗುತ್ತದೆ. ಹೀಗಾಗಿ ನಟಿಯರು ದೇಹ ಸೌಂದರ್ಯಕ್ಕೆ ಸಂಬಂಧಿಸಿದ ಸಲ್ಲದ ಮಾತುಗಳಿಗೆ ತಲೆಕೆಡಿಸಿಕೊಳ್ಳ ಬಾರದು ಎಂದು ಕಿವಿಮಾತು ಹೇಳಿದ್ದಾರೆ ನಟಿ ಅದಿತಿ ರಾವ್‌.‘ಎಲ್ಲರೂ ಈ ರಂಗಕ್ಕೆ ನಟನೆಯ ಉದ್ದೇಶವನ್ನಿಟ್ಟುಕೊಂಡೇ ಬರುತ್ತಾರೆ. ಹೀಗಾಗಿ ನಟನೆಯ ಹೊರತಾಗಿ ಯಾರು ಏನೇ ಹೇಳಿದರು ತಲೆಕೆಡಿಸಿ ಕೊಳ್ಳಬಾರದು. ಸಿನಿಮಾದಲ್ಲಿ ನಟಿಸುವಾಗ ಅಂದವಾಗಿ, ಆಕರ್ಷಕವಾಗಿ ಕಾಣಿಸಿಕೊಳ್ಳಬೇಕಾಗುತ್ತದೆ. ಯಾಂತ್ರಿಕವಾಗಿ ಸೌಂದರ್ಯದ ಬಗ್ಗೆ ಯೋಚಿಸುವ ಬದಲು ವಿಭಿನ್ನ ರೀತಿಯಲ್ಲಿ ಚಿಂತಿಸಿ. ಪ್ರತಿಭೆ ಪ್ರಧಾನವಾಗುತ್ತದೆಯೇ ಹೊರತು, ಬಾಹ್ಯ ಸೌಂದರ್ಯವೊಂದೇ ಅಲ್ಲ’ ಎಂದು ಸಂದರ್ಶನವೊಂದರಲ್ಲಿ ಅದಿತಿ ಉತ್ತರಿಸಿದ್ದಾರೆ.ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವ ‘ವಜೀರ್‌’ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಅದಿತಿ ಇತ್ತೀಚೆಗೆ ಜ್ಯೂಸ್‌ ನಿಯತಕಾಲಿಕೆಯ ಮುಖಪುಟದಲ್ಲಿಯೂ ರಾರಾಜಿಸಿದ್ದರು. ‘ಮಹಿಳೆಯರು ನಟನೆಯ ಹೊರತಾಗಿ ದೇಹಕ್ಕೆ, ದಿರಿಸಿಗೆ ಸಂಬಂಧಿಸಿದ ಮಾತುಗಳನ್ನೇ ಹೆಚ್ಚಾಗಿ ಕೇಳಬೇಕಾಗುತ್ತದೆ. ಪುರುಷರ ದೇಹದ ದಪ್ಪವಾಗಲಿ ಸಣ್ಣ ಆಗಲಿ ಯಾರೂ ಅಷ್ಟಾಗಿ ಮಾತನಾಡುವುದಿಲ್ಲ. ಆದರೆ ಮಹಿಳೆಯರ ವಿಷಯಕ್ಕೆ ಬಂದಾಗ ಯೋಚಿಸುವ ರೀತಿಯೇ ಬೇರೆ. ಪುರುಷರೇ ಇರಲಿ, ಮಹಿಳೆಯರೇ ಇರಲಿ ಪ್ರತಿಭಾನ್ವಿತರು ಹಾಗೂ ಕ್ರಿಯಾಶೀಲರು ಎನ್ನುವ ಕಾರಣಕ್ಕಾಗಿಯೇ ಈ ಕ್ಷೇತ್ರದಲ್ಲಿ ಅವಕಾಶ ಗಿಟ್ಟಿಸಿಕೊಂಡಿರುವುದು. ಹೀಗಾಗಿ ಮಹಿಳೆಯರ ಕುರಿತಾಗಿ ಯೋಚಿಸುವ ರೀತಿ ಬದಲಾಗಬೇಕಿದೆ’ ಎಂದಿದ್ದಾರೆ ಅದಿತಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.