`ಪ್ರತಿಭೆ ಹೊರ ಹಾಕುವುದರಿಂದ ಗೌರವ'

7

`ಪ್ರತಿಭೆ ಹೊರ ಹಾಕುವುದರಿಂದ ಗೌರವ'

Published:
Updated:
`ಪ್ರತಿಭೆ ಹೊರ ಹಾಕುವುದರಿಂದ ಗೌರವ'

ಯಾದಗಿರಿ: ನಮ್ಮಿಂದ ಎನೂ ಸಾಧ್ಯ ಇಲ್ಲ, ಸಮಾಜ ಅಂಗವಿಕಲರನ್ನು ಬೇರೆ ದಷ್ಠಯಿಂದ ನೋಡುತ್ತಾರೆ ಕೀಳರಿಮೆ ಬಿಟ್ಟು ನಮ್ಮಲ್ಲಿರುವ ಪ್ರತಿಭೆ ಹೊರ ಹಾಕಿದಾಗ ಸಮಾಜದಲ್ಲಿ ಗೌರವ ತಾನಾಗೆ ಸಿಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಾಂಜನಯ್ಯ ಹೇಳಿದರು.

ನಗರದ ಪದವಿ ಪೂರ್ವ ಮಹಾವಿದ್ಯಾಲಯದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ 2012-13 ನೇ ಸಾಲಿನ ಜಿಲ್ಲಾ ಮಟ್ಟದ 14 ರಿಂದ 17 ವರ್ಷದ ವಿಲಚೇತನ ಮಕ್ಕಳ  ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿದರು.

ಅನೇಕ  ಅಂಗವಿಕಲರು ಕ್ರೀಡೆಯಲ್ಲಿ ತಮ್ಮ ಪ್ರತಿಭೆ ಪದರ್ಶಿಸಿ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಕಾರಣ ಸರ್ಕಾರದ ಸವಲತ್ತುಗಳ ಲಾಭ ಪಡೆದುಕೊಂಡು ಕ್ರೀಡೆಯಲ್ಲಿ ಮುಂದೆಬರುವಂತೆ ಕರೆ ನೀಡಿದರು.

ಕ್ರೀಡೆಯಲ್ಲಿ ಸೋಲು ಗೆಲವು ಸಾಮಾನ್ಯ. ಅದರ ಬಗ್ಗೆ ಚಿಂತೆ ಮಾಡದೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ ಎಂದು ಪ್ರಾಂಶುಪಾಲ  ಜುಗೇರಿ  ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. 

ಸಮಾರಂಭದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಸೂಗಪ್ಪ ಪಾಟೀಲ, ಶಿಕ್ಷಣಾಧಿಕಾರಿ ವೆಂಕೋಬಾ, ಶಂಕರ ಸೋನಾರ ಭಾಗವಹಿಸಿದ್ದರು. ಜಿಲ್ಲೆಯ ಮೂರು ತಾಲೂಕಿನ 120 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry