ಮಂಗಳವಾರ, ಮೇ 17, 2022
24 °C

ಪ್ರತಿಯೊಬ್ಬ ಪ್ರಜೆ ವಿರೋಧ ಪಕ್ಷದ ನಾಯಕ: ಉಮಾಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬನಹಟ್ಟಿ: `ಆಡಳಿತಾರೂಢ ಬಿಜೆಪಿ ನಾಯಕರು ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಸಂಪತ್ಭರಿತ ಕರ್ನಾಟಕದ ಲೂಟಿ ನಡೆದಿದೆ. ಜನತೆ ಜಾಗೃತರಾಗದೆ ಹೋದರೆ, ದೇಶಕ್ಕೆ ದುರ್ದೆಶೆ ತಪ್ಪಿದ್ದಲ್ಲ. ಪ್ರತಿಯೊಬ್ಬ ಪ್ರಜೆಯೂ ವಿರೋಧ ಪಕ್ಷದ ನಾಯಕ ನಾಗಿ, ಭ್ರಷ್ಟಾಚಾರದ ವಿರುದ್ಧ ಹೋರಾ ಡಬೇಕು~ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕಿ ಉಮಾಶ್ರೀ ಹೇಳಿದರು.

 

ರಬಕವಿ-ಬನಹಟ್ಟಿ ನಗರ ಕಾಂಗ್ರೆಸ್ ಘಟಕ ಭಾನುವಾರ 30ನೆಯ ವಾರ್ಡಿ ನಲ್ಲಿ ಏರ್ಪಡಿಸಿದ್ದ ಗಾಂಧಿ ಜಯಂತಿ ಹಾಗೂ ಮತದಾರರೊಂದಿಗೆ ಮುಖಾ ಮುಖಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.`ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದವರಿಗೆ ಡಿನೋಟಿಫೈ ಭೂಹಗ ರಣದಲ್ಲಿ ಜೈಲು ಸೇರುವ ಭಯ ಬಂದಿದೆ. ಶಿಸ್ತಿನ ಪಕ್ಷದಲ್ಲಿ ಇಂದು ಭ್ರಷ್ಟರೇ ತುಂಬಿಕೊಂಡಿದ್ದಾರೆ. ಮಾತು ತಪ್ಪಿ ನಡೆಯುವ ಜನಪ್ರತಿನಿಧಿಗಳನ್ನು ಮತದಾರ ಪ್ರಶ್ನಿಸುವಂತಾಗಬೇಕು~ ಎಂದು ಉಮಾಶ್ರೀ ನುಡಿದರು.

 

ನಗರಸಭೆ ಹಿಂದಿನ ಅಧ್ಯಕ್ಷ ಸಂಗಪ್ಪ ಕುಂದಗೋಳ ಅಧ್ಯಕ್ಷತೆ ವಹಿಸಿದ್ದರು. ಕಾಂಗ್ರೆಸ್ ಮುಖಂಡರಾದ ಡಾ. ಎ ಆರ್ ಬೆಳಗಲಿ, ಸಂಗಪ್ಪ ಹಲ್ಲಿ, ದುಂಡಪ್ಪ ಕುಂಬಾರ, ಮಹಾದೇವ ಮಹಾಲಿಂಗ ಪುರ,  ಸದಾಶಿವ ಗೊಂದಕರ, ರಾಜ ಶೇಖರ ಮಟ್ಟಿಕಲ್ಲಿ ಮುಂತಾದವರು ಉಪಸ್ಥಿತರಿದ್ದರು.ಸದಾಶಿವ ಕೈಸಲಗಿ ಸ್ವಾಗತಿಸಿದರು. ಆಶಾ ಹೊಸೂರ ವಂದಿಸಿದರು.ವಕ್ತಾರ ರವೀಂದ್ರ ಹಟ್ಟಿ ನಿರೂಪಿಸಿದರು.  ಸಂಗೀತಾ ಬನ್ನೂರು ಮತ್ತು ಸಂಗಡಿಗರು ಪ್ರಾರ್ಥಿಸಿದರು. 

 

ಪಡಿತರ: ಅನ್ಯಾಯ  

ಬನಹಟ್ಟಿ: ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕಡುಬಡವರಿಗೆಂದು ಕೇಂದ್ರ ಸರಕಾರ ಪ್ರತಿ ತಿಂಗಳು 35 ಕೆಜಿ ಅಕ್ಕಿ ಬಿಡುಗಡೆ ಮಾಡುತ್ತದೆ. ಆದರೆ ರಾಜ್ಯದಲ್ಲಿ ಕೇವಲ 25 ಕೆಜಿ ಮಾತ್ರ ವಿತರಿಸಲಾಗುತ್ತಿದೆ.ಉಳಿದ ಧಾನ್ಯವನ್ನು ಕಪ್ಪು ಮಾರ್ಕೇಟ್‌ನಲ್ಲಿ ಮಾರಾಟಮಾಡಿ, ಬಡವರಿಗೆ ಅನ್ಯಾಯ ಮಾಡಲಾಗುತ್ತಿದೆ~ ಎಂದು ಕಾಂಗ್ರೆಸ್‌ನ ಸಂಗಪ್ಪ ಕುಂದ ಗೋಳ ಆರೋಪಿಸಿದ್ದಾರೆ.ಪಕ್ಷದ `ಮುಖಾಮುಖಿ ಕಾರ್ಯ ಕ್ರಮ~ದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, `ಕಳೆದ ಮೂರು ವರ್ಷಗಳಿಂದ ಬಿಜೆಪಿ ಈ ರೀತಿ ಬಡವರಿಗೆ ಮೋಸ ಮಾಡುತ್ತ ಬಂದಿದೆ. ಇದರ ವಿರುದ್ಧ ನಮ್ಮ ಪಕ್ಷ ಹೋರಾಟ ನಡೆಸಲಿದೆ~ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.