ಪ್ರತಿಷ್ಠಾನದ ಮುಖ್ಯಸ್ಥನ ಹುದ್ದೆ ತ್ಯಜಿಸಿದ ಆರ್ಮ್‌ಸ್ಟ್ರಾಂಗ್

7

ಪ್ರತಿಷ್ಠಾನದ ಮುಖ್ಯಸ್ಥನ ಹುದ್ದೆ ತ್ಯಜಿಸಿದ ಆರ್ಮ್‌ಸ್ಟ್ರಾಂಗ್

Published:
Updated:

ವಾಷಿಂಗ್ಟನ್ (ಎಎಫ್‌ಪಿ): ಉದ್ದೀಪನ ಮದ್ದು ವಿವಾದದಲ್ಲಿ ಸಿಲುಕಿರುವ ಸೈಕ್ಲಿಸ್ಟ್ ಲ್ಯಾನ್ಸ್ ಆರ್ಮ್‌ಸ್ಟ್ರಾಂಗ್ ಅವರು `ಲಿವ್‌ಸ್ಟ್ರಾಂಗ್~  ಕ್ಯಾನ್ಸರ್ ಪ್ರತಿಷ್ಠಾನದ ಮುಖ್ಯಸ್ಥನ ಸ್ಥಾನದಿಂದ ಕೆಳಗಿಳಿದಿದ್ದಾರೆ.ಅದೇ ರೀತಿ ಬುಧವಾರ ನಡೆದ ಮತ್ತೊಂದು ಬೆಳವಣಿಗೆಯಲ್ಲಿ ನೈಕಿ ಕಂಪೆನಿ ಆರ್ಮ್‌ಸ್ಟ್ರಾಂಗ್ ಜೊತೆಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಂಡಿದೆ. ಕಳೆದ ಹಲವು ವರ್ಷಗಳಿಂದ ನೈಕಿ ಕಂಪೆನಿ ಆರ್ಮ್‌ಸ್ಟ್ರಾಂಗ್ ಅವರ ಪ್ರಾಯೋಜಕತ್ವ ವಹಿಸಿಕೊಂಡಿತ್ತು.ಕ್ಯಾನ್ಸರ್ ರೋಗಿಗಳಿಗೆ ನೆರವು ನೀಡುವ ಉದ್ದೇಶದಿಂದ ಆರ್ಮ್‌ಸ್ಟ್ರಾಂಗ್ 1997 ರಲ್ಲಿ `ಲಿವ್‌ಸ್ಟ್ರಾಂಗ್~ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry