ಭಾನುವಾರ, ಮೇ 16, 2021
29 °C

ಪ್ರತಿ ಕ್ಷಣವೂ ಸಂತಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): `ಸುದೀರ್ಘ ಕಾಲ ನೋವಿನಿಂದ ಬಳಲಿದ ನಂತರ ಮತ್ತೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದು ನನ್ನ ಅದೃಷ್ಟ. ಆದ್ದರಿಂದ ಪ್ರತಿ ಸಂದರ್ಭವನ್ನೂ ಸಂತೋಷದಿಂದ ಅನುಭವಿಸುತ್ತೇನೆ...~-ಹೀಗೆ ಹೇಳಿದ್ದು ಡೆಲ್ಲಿ ಡೇರ್‌ಡೆವಿಲ್ಸ್ ತಂಡದ ಇರ್ಫಾನ್ ಪಠಾಣ್. ಗಾಯದ ಸಂಕಷ್ಟಕ್ಕೆ ಒಳಗಾಗಿ ಸುಮಾರು ಎರಡು ವರ್ಷಗಳ ಕಾಲ ಭಾರತ ತಂಡದಿಂದ ಹೊರಗಿದ್ದ ಈ ವೇಗಿ ಈ ಸಲದ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. `ಆದ್ದರಿಂದಲೇ ಇದು ಬದುಕಿನ ಎರಡನೇ ಇನಿಂಗ್ಸ್~ ಎಂದು ಇರ್ಫಾನ್ ಹೇಳಿದ್ದಾರೆ.`ದೀರ್ಘ ಕಾಲ ಗಾಯಕ್ಕೆ ಒಳಗಾಗಿ ಮತ್ತೆ ತಂಡಕ್ಕೆ ಮರಳಿದವರ ಸಂಖ್ಯೆ ಕಡಿಮೆ. ಆದರೆ, ಈಗ ಸಿಕ್ಕ ಅಮೂಲ್ಯ ಅವಕಾಶ ಕೇವಲ ವಿಕೆಟ್ ಪಡೆಯಲು ಮಾತ್ರವಲ್ಲ. ಪ್ರತಿಕ್ಷಣವನ್ನೂ ಸಂಭ್ರಮದಿಂದ ಅನುಭವಿಸಲು ಎಂದು ಭಾವಿಸಿದ್ದೇನೆ~ ಎನ್ನುತ್ತಾರೆ ಇರ್ಫಾನ್.`ಐಪಿಎಲ್‌ನಿಂದ ಸಾಕಷ್ಟು ಅನುಕೂಲವಾಗಿದೆ. ಈ ಸಲವೂ ನನ್ನ ಸಾಮರ್ಥ್ಯ ಸಾಬೀತು ಪಡೆಸಲು ವೇದಿಕೆಯಾಗಿದೆ. ಸಾಕಷ್ಟು ಪಂದ್ಯಗಳನ್ನು ಆಡಬೇಕು ಎನ್ನುವ ಬಯಕೆ ನನ್ನದು~ ಎಂದು 27 ವರ್ಷದ ಇರ್ಫಾನ್ ನುಡಿದರು.ಉತ್ತಮ ಪ್ರದರ್ಶನ: ಹಿಂದಿನ ಆವೃತ್ತಿಯಲ್ಲಿ ನೀಡಿದ ಪ್ರದರ್ಶನವನ್ನು ಈ ಸಲವೂ ನೀಡುತ್ತೇನೆ ಎಂದು ಕಿಂಗ್ಸ್ ಇಲೆವೆನ್ ತಂಡದ ಆಟಗಾರ ಪಾಲ್ ವೆಲ್ತಾಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ನಾಲ್ಕನೇ ಆವೃತ್ತಿಯಲ್ಲಿ 28 ವರ್ಷದ ಈ ಕ್ರಿಕೆಟಿಗ 14 ಪಂದ್ಯಗಳಿಂದ 463 ಗಳಿಸಿ ಎಲ್ಲರ ಗಮನ ಸೆಳೆದಿದ್ದರು.

`ಕಠಿಣ ಅಭ್ಯಾಸ ನಡೆಸುತ್ತಿದ್ದೇನೆ. ಸಹಜವಾಗಿ ನನ್ನ ಮೇಲೂ ಒತ್ತಡವಿದೆ. ಕಳೆದ ಸಲದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಶತಕ ಗಳಿಸಿದ ನಂತರ ನಾನು ತಂಡದ ಭರವಸೆ ಎನಿಸಿದೆ. ಈ ಬಾರಿಯೂ ಹಿಂದಿನ ವರ್ಷದ ಪ್ರದರ್ಶನವನ್ನು ಪುನರಾವರ್ತಿಸುತ್ತೇನೆ~ ಎಂದು ಅವರು ತಿಳಿಸಿದರು.ಇದು ಮಿಶ್ರ ಫಲದ ವರ್ಷ (ಚೆನ್ನೈ ವರದಿ): `ಏಳು ಬೀಳುಗಳ ನಡುವೆ ಈ ಒಂದು ವರ್ಷ ಕಳೆದು ಹೋಯಿತು. ವಿಶ್ವಕಪ್ ಜಯಿಸಿದ ಸಂಭ್ರಮ ಒಂದಡೆಯಾದರೆ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಲ್ಲಿ ಆದ ನಿರಾಸೆಯೂ ನಮ್ಮನ್ನು ಕಾಡಿತು. ಆದ್ದರಿಂದ ಇದು ಮಿಶ್ರ ಫಲದ ವರ್ಷ~ ಎಂದು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಹೇಳಿದ್ದಾರೆ. ಐಪಿಎಲ್ ಉದ್ಘಾಟನಾ ಸಮಾರಂಭದ ವೇಳೆ ಇಲ್ಲಿಗೆ ಆಗಮಿಸಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.