ಪ್ರತಿ ಗ್ರಾಮಕ್ಕೂ `ಆರೋಗ್ಯ, ನೈರ್ಮಲ್ಯ ವಾಹಿನಿ'

7

ಪ್ರತಿ ಗ್ರಾಮಕ್ಕೂ `ಆರೋಗ್ಯ, ನೈರ್ಮಲ್ಯ ವಾಹಿನಿ'

Published:
Updated:

ಮೈಸೂರು: ಕಡಿಮೆ ಜಾಗದಲ್ಲಿ ಶೌಚಾಲಯ ನಿರ್ಮಿಸಿಕೊಳ್ಳುವುದು ಹೇಗೆ? ಸಕಾಲ, ಮಡಿಲು ಕಿಟ್, ಸಂಪೂರ್ಣ ಸ್ವಚ್ಛತಾ ಆಂದೋಲನದ ಬಗ್ಗೆ ಮಾಹಿತಿ ಪಡೆಯುವುದು ಹೇಗೆ? ಎಂದು ಇನ್ನು ಮುಂದೆ ಚಿಂತಿಸಬೇಕಿಲ್ಲ!ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಪ್ರತಿ ಗ್ರಾಮಗಳಿಗೂ `ಆರೋಗ್ಯ ಮತ್ತು ನೈರ್ಮಲ್ಯ ವಾಹಿನಿ' ಬರಲಿದೆ. ಸರ್ಕಾರಿ ಸೌಲಭ್ಯಗಳನ್ನು ಹೇಗೆ ಬಳಸಿ ಕೊಳ್ಳಬೇಕು ಎಂಬುದರ ಬಗ್ಗೆ ಕಿರುಚಿತ್ರ ಗಳ ಮೂಲಕ ಮಾಹಿತಿ ನೀಡಲಿದೆ.ಏನಿದು ವಾಹನ?: ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯು ಟೆಂಪೋ ಟ್ರಾವೆಲರ್ ವಾಹನವನ್ನು ಜಿಲ್ಲಾ ಪಂಚಾಯಿತಿಗೆ ನೀಡಿದೆ.ಈ ವಾಹನವನ್ನು ಬಳಸಿಕೊಂಡು ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆ ಗಳನ್ನು ಪ್ರತಿಯೊಬ್ಬರಿಗೂ ತಲುಪಿ ಸಲು ಜಿಲ್ಲಾ ಪಂಚಾಯಿತಿ ಮುಂದಾ ಗಿದೆ. ವರ್ಷದ 365 ದಿನವೂ ಪ್ರತಿ ದಿನ ಒಂದೊಂದು ಗ್ರಾಮಗಳಿಗೆ ತೆರಳಲಿರುವ ಈ ವಾಹನ ಶಾಲಾ ಆವರಣ, ಅಂಗನವಾಡಿ ಕೇಂದ್ರಗಳ ಬಳಿ ಗ್ರಾಮದ ಜನರಿಗೆ ಮಾಹಿತಿ ನೀಡಲಿದೆ. ಈ ವಾಹನ ಸಿದ್ಧಪಡಿಸಲು ಜಿಲ್ಲಾ ಪಂಚಾಯಿತಿ 6 ಲಕ್ಷ ರೂಪಾಯಿ ಹಣ ವ್ಯಯಿಸಿದೆ.ವಾಹನದಲ್ಲಿ ಏನಿದೆ?: `ಆರೋಗ್ಯ, ನೈರ್ಮಲ್ಯ ವಾಹಿನಿ'ಯಲ್ಲಿ ಜನರೇ ಟರ್, ಪ್ರೊಜೆಕ್ಟರ್, ಲ್ಯಾಪ್‌ಟಾಪ್, ಸೌಂಡ್‌ಬಾಕ್ಸ್, ದೊಡ್ಡ ಸ್ಕ್ರೀನ್ ಅಳವ ಡಿಸಲಾಗಿದೆ. ವಾಹನದಲ್ಲಿ ಇಬ್ಬರು ಕುಳಿತು ಕಾರ್ಯಕ್ರಮ ಬಿತ್ತರಿಸಲು ಸ್ಥಳಾವಕಾಶ ಕಲ್ಪಿಸಲಾಗಿದೆ.ಚಾಲನೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕಾ.ಪು.ಸಿದ್ದವೀರಪ್ಪ `ಆರೋಗ್ಯ, ನೈರ್ಮಲ್ಯ ವಾಹಿನಿ'ಗೆ ಜಿಲ್ಲಾ ಪಂಚಾ ಯಿತಿ ಆವರಣದಲ್ಲಿ ಗುರುವಾರ ಚಾಲನೆ ನೀಡಿದರು.ಉಪಾಧ್ಯಕ್ಷೆ ಎಂ.ಕೆ. ಸುಚಿತ್ರ, ಜಿಲ್ಲಾ ಪಂಚಾಯಿತಿ  ಸಿಇಒ ಡಾ.ಅಜಯ್ ನಾಗಭೂಷಣ್, ಯೋಜನಾಧಿಕಾರಿ ವಸುಂಧರಾ ದೇವಿ ಇದ್ದರು. ಇದೇ ಸಂದರ್ಭದಲ್ಲಿ ಕಲಾವಿರು ಬೀದಿ ನಾಟಕ ಪ್ರದರ್ಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry