ಶುಕ್ರವಾರ, ಜನವರಿ 24, 2020
18 °C

ಪ್ರತಿ ಗ್ರಾಮಕ್ಕೆ ಬಸ್‌ ಓಡಿಸಿ: ಶಾಸಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ: ‘ರಸ್ತೆ ದುರಸ್ತಿ ಮಾಡಿಸು­ವುದು ನನ್ನ ಕೆಲಸ. ರಸ್ತೆ ಸರಿಯಿಲ್ಲ­ವೆಂದು ಬಸ್‌ ರೂಟ್‌ಗಳನ್ನು ಕಡಿತ ಮಾಡಿದ ಬಗ್ಗೆ ದೂರುಗಳು ಬಂದಿವೆ. ಆರು ತಿಂಗಳಲ್ಲಿ ರಸ್ತೆ ದುರಸ್ತಿ ಮಾಡಿಸ­ಲಾ­ಗು­ವುದು. ಪ್ರತಿ ಹಳಿಗಳಿಗೂ ಬಸ್‌ ಓಡಿಸಲೇಬೇಕು’ ಎಂದು ಡಿಪೊ ವ್ಯವಸ್ಥಾಪಕರಿಗೆ ಶಾಸಕ ಮಾಲೀಕಯ್ಯ ಗುತ್ತೇದಾರ ಆದೇಶಿಸಿದರು.ಅವರು ಬುಧವಾರ ಡಿಪೊಗೆ ಭೇಟಿ ನೀಡಿ, ಅಲ್ಲಿಯ ವ್ಯವಸ್ಥಾಪಕ ಶಿವ­ಮೂರ್ತಿ ಹಾಗೂ ಸಹಾಯಕ ಕಾರ್ಯ ಅಧೀಕ್ಷಕ ವಿಠಲ ರಾವ್‌ ಕದಂಬ ಅವರೊಂದಿಗೆ ಬಸ್ ರೂಟ್‌ಗಳು ಕಡಿತ­ವಾದ ಬಗ್ಗೆ ಮಾಹಿತಿ ಪಡೆದು, ನಾಳೆ­ಯಿಂದಲೇ ಆ ರೂಟ್‌ಗಳಲ್ಲಿ ಬಸ್  ಓಡಿಸಬೇಕು’ ಎಂದು ಸೂಚಿಸಿದರು.40 ಹೊಸ ಬಸ್: ‘ಡಿಪೊಗೆ 40 ಹೊಸ ಬಸ್‌ಗಳನ್ನು ನೀಡುವಂತೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಭೇಟಿ ಮಾಡಿ ಕೋರಿದ್ದೇನೆ. ಅವರು ಭರವಸೆ ನೀಡಿದ್ದಾರೆ. ಮತ್ತು ಬಸ್‌ ನಿಲ್ದಾಣದ ಆಧುನಿಕರಣಕ್ಕೆ ₨ 2 ಕೋಟಿ ಮಂಜೂರು ಮಾಡಿಸಿದ್ದೇನೆ’ ಎಂದರು.ರಾಜ್ಯ ಹೆದ್ದಾರಿ ಅಡಿಗಲ್ಲು: ಚವಡಾಪುರದಿಂದ ಕರಜಗಿವರೆಗೆ 45 ಕಿ.ಮೀ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಆಂಧ್ರ ಮೂಲದವರಿಗೆ ಟೆಂಡರ್‌ ಆಗಿದೆ. ಕರಜಗಿಯಿಂದ ಹೊಸೂರವರೆಗೆ ಎಸ್‌.ಆರ್‌.ಕೆ ಕಂಪನಿ ಅವರಿಗೆ ಟೆಂಡರ್‌ ಆಗಿದೆ. ಡಿಸೆಂಬರ್‌ ಕೊನೆ ವಾರದಲ್ಲಿ ಈ ಕಾಮಗಾರಿಗಳಿಗೆ ಮುಖ್ಯಮಂತ್ರಿ ಅವರು ಅಡಿಗಲ್ಲು ನೆರವೇರಿಸುವರು’ ಎಂದು ಶಾಸಕರು ತಿಳಿಸಿದರು.ಶಾಂತಯ್ಯ ಹಿರೇಮಠ, ಶ್ರೀಶೈಲ ಬಳೂರ್ಗಿ, ‘ಬಸ್‌ಗಳು ಮಾರ್ಗ ಮಧ್ಯ­ದಲ್ಲಿ ಕೆಟ್ಟು ನಿಲ್ಲುತ್ತವೆ’ ಎಂದು ದೂರಿ, ಇಲ್ಲಿಂದ ಸೋಲಾಪುರ ಮತ್ತು ಪುಣೆ, ಬೆಂಗಳೂರುಗಳಿಗೆ ಬಸ್‌ ಓಡಿಸುವಂತೆ ಮನವಿ ಮಾಡಿದರು. ಡಿಪೊ ವ್ಯವಸ್ಥಾಪಕರು ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪ್ರತಿಕ್ರಿಯಿಸಿ (+)