`ಪ್ರತಿ ಜಯ ಸ್ಮರಣೀಯ'

ಮುಂಬೈ: ಸ್ಪಿನ್ನರ್ಗಳ ಜಾದೂ, ಕೆವಿನ್ ಪೀಟರ್ಸನ್ ಅವರ ಅಬ್ಬರದ ಶತಕ ಹಾಗೂ ಅಲಸ್ಟೇರ್ ಕುಕ್ ಅವರ ಜವಾಬ್ದಾರಿಯುತ ಇನಿಂಗ್ಸ್ ಇಂಗ್ಲೆಂಡ್ ತಂಡದ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳು.
ಈ ಅಂಶಗಳು ಆಂಗ್ಲರ ಬಳಗದಲ್ಲಿ ಈಗ ಹೊಸ ಕನಸುಗಳು ಗರಿಗೆದರಲು ಕಾರಣವಾಗಿವೆ. `ಈ ಪಂದ್ಯ ಶ್ರೇಷ್ಠ ಗೌರವವನ್ನು ನಾನು ಸಹ ಆಟಗಾರರಿಗೆ ಅರ್ಪಿಸುತ್ತೇನೆ. ಈ ಗೆಲುವು ನಮ್ಮ ನಡುವಿನ ಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಒಗ್ಗಟ್ಟಾಗಿರಲು ಸ್ಫೂರ್ತಿ ನೀಡಿದೆ' ಎಂದು ಪೀಟರ್ಸನ್ ಸೋಮವಾರ ಪಂದ್ಯದ ಬಳಿಕ ನುಡಿದರು.
`ಭಾರತದಲ್ಲಿ ಸಿಗುವ ಪ್ರತಿ ಗೆಲುವು ಕೂಡ ಖುಷಿ ನೀಡುವಂಥದ್ದು. ಹಾಗಾಗಿ ಇದು ಕೂಡ ಸ್ಮರಣೀಯ ಜಯ. ನಾನು ಇಲ್ಲಿ 18 ಏಕದಿನ ಪಂದ್ಯ ಆಡಿದ್ದೇನೆ. ಗೆದ್ದಿರುವುದು ಕೇವಲ 1 ಪಂದ್ಯ. ಆದರೆ ಹೆಚ್ಚು ಟೆಸ್ಟ್ ಪಂದ್ಯ ಗೆದ್ದ್ದ್ದಿದೇನೆ' ಎಂದು ಅವರು ಹೇಳಿದರು.
`ಈ ಗೆಲುವು ಪ್ರತಿ ಆಟಗಾರರಲ್ಲಿ ತುಂಬಾ ಉತ್ಸಾಹಕ್ಕೆ ಕಾರಣವಾಗಿದೆ. ಈಗ ಸರಣಿ ಸಮಬಲವಾಗಿದೆ. ಇನ್ನೂ ಎರಡು ಪಂದ್ಯಗಳಿವೆ. ಅವುಗಳಲ್ಲಿ ಉತ್ತಮ ಪ್ರದರ್ಶನ ತೋರುವುದು ನಮ್ಮ ಗುರಿ. ಅದಕ್ಕಾಗಿ ಮತ್ತಷ್ಟು ಕಠಿಣ ಪ್ರಯತ್ನ ಹಾಕುತ್ತೇವೆ' ಎಂದು ನಾಯಕ ಕುಕ್ ನುಡಿದರು.
`ಪೀಟರ್ಸನ್ ಅವರ ಇನಿಂಗ್ಸ್ ಅದ್ಭುತವಾಗಿತ್ತು. ಆ ರೀತಿ ಆಡಲು ಕೆಲವರಿಗೆ ಮಾತ್ರ ಸಾಧ್ಯ. ಹಾಗೇ, ನಮ್ಮ ಸ್ಪಿನ್ನರ್ಗಳು ಇಲ್ಲಿನ ಪಿಚ್ ನೀಡುತ್ತಿದ್ದ ನೆರವನ್ನು ಚೆನ್ನಾಗಿ ಸದುಪಯೋಗಪಡಿಸಿಕೊಂಡರು' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.