ಮಂಗಳವಾರ, ಅಕ್ಟೋಬರ್ 15, 2019
29 °C

ಪ್ರತಿ ಭಾನುವಾರ ವರ್ತಕರಿಗೆ ಕಡ್ಡಾಯ ರಜೆ

Published:
Updated:
ಪ್ರತಿ ಭಾನುವಾರ ವರ್ತಕರಿಗೆ ಕಡ್ಡಾಯ ರಜೆ

ಹೊಳೆನರಸೀಪುರ: ಪಟ್ಟಣದ ಎಲ್ಲ ವರ್ತಕರು ಭಾನುವಾರ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ರಜೆ ಮಾಡಿದ್ದರು.

ಪಟ್ಟಣದಲ್ಲಿ ಈವರಿಗೆ ಕೆಲ ಅಂಗಡಿಗಳನ್ನು ಹೊರತುಪಡಿಸಿ ಬೇರಾರೂ ವಾರದಲ್ಲಿ ಒಂದು ದಿನವೂ ರಜೆ ಮಾಡುತ್ತಿರಲಿಲ್ಲ. ವಾರದಲ್ಲೊಂದು ದಿನ ರಜಾ ಮಾಡಲೇಬೇಕು ಎಂಬುದು ಕಾರ್ಮಿಕ ಇಲಾಖೆ ನಿಯಮ.ಇದಕ್ಕಾಗಿ ಪಟ್ಟಣದ ದಿನಸಿ, ಬಟ್ಟೆ, ಚಿನ್ನಾಬೆಳ್ಳಿ ಅಂಗಡಿ ಮಾಲೀಕರು ಸಭೆ ಈಚೆಗೆ ನಡೆಸಿ ಭಾನುವಾರದಂದು ರಜಾ ಮಾಡುವಂತೆ ತೀರ್ಮಾನಿಸಿ ಅದರಂತೆ ವರ್ತಕರು ಭಾನುವಾರ ಅಂಗಡಿಗಳನ್ನು ಮುಚ್ಚಿದ್ದರು.ವರ್ತಕ ಸಂಘದ ಅಧ್ಯಕ್ಷ ಕೆ.ಶ್ರೀಧರ್ ಅವರ ಅರಕಲಗೂಡು ರಸ್ತೆಯಲ್ಲಿರುವ ಸಿಮೆಂಟ್ ಅಂಗಡಿ ಬಾಗಿಲು ತೆರೆದಿತ್ತು. ಸಂಘದ ನಿರ್ಣಯಕ್ಕೆ ಅಧ್ಯಕ್ಷರೇ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಪೇಟೆಯಲ್ಲಿ ಒಂದೆರೆಡು ಅಂಗಡಿಯವರು ಬಾಗಿಲು ತೆರೆದರು.

 

ಇದರಿಂದ ಬೇಸರಗೊಂಡ ಇತರ ವರ್ತಕರು, ಅಧ್ಯಕ್ಷರ ಅಂಗಡಿಗೆ ತೆರಳಿ ಬಾಗಿಲು ಮುಚ್ಚಿಸಿದರು. ಭಾನುವಾರ ರಜೆ ಮಾಡದ ವರ್ತಕರು ಕೂಡಾ ವಾರದಲ್ಲಿ ಒಂದು ದಿನ ಅಂಗಡಿ ರಜೆ ಮಾಡಲೇಬೇಕು ಎಂದು ವರ್ತಕ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

Post Comments (+)