ಪ್ರತಿ ಮನೆಗೂ ಶೌಚಾಲಯ ಅವಶ್ಯಕ: ಶ್ರೀನಿವಾಸ

ಮಂಗಳವಾರ, ಜೂಲೈ 23, 2019
27 °C

ಪ್ರತಿ ಮನೆಗೂ ಶೌಚಾಲಯ ಅವಶ್ಯಕ: ಶ್ರೀನಿವಾಸ

Published:
Updated:

ಹುಣಸಗಿ: ಪ್ರತಿಯೊಂದು ಮನೆಗೆ ದೇವರ ಮನೆ, ಅಡುಗೆ ಮನೆ ಎಷ್ಟು ಮುಖ್ಯವೋ ಅಷ್ಟೇ ಶೌಚಾಲಯವು ಅತ್ಯಂತ ಮುಖ್ಯವಾದುದು ಎಂದು ಇನ್‌ಫೋಸಿಸ್ ಪ್ರತಿಷ್ಠಾನ ಶ್ರೀನಿವಾಸ ದೇಶಮುಖ ತಿಳಿಸಿದರು.ಹುಣಸಗಿ ಸಮೀಪದ ವಜ್ಜಲ, ಕಲ್ಲದೇವನಹಳ್ಳಿ, ದೇವತಕಲ್ ಸೇರಿದಂತೆ ಇತರ ಗ್ರಾಮಗಳಲ್ಲಿ ಇನ್‌ಫೋಸಿಸ್ ಪ್ರತಿಷ್ಠಾನ ಮತ್ತು ಕೊತ್ತಲ ಬಸವೇಶ್ವರ ಭಾರತಿಯ ಶಿಕ್ಷಣ ಸಮೀತಿಯ ಪರಿಶುದ್ಧ ಯೋಜನೆಯಡಿ  ಶೌಚಾಲಯದ ಅನುದಾನ ವಿತರಿಸಿ ಮಾತನಾಡಿದರು.ಗ್ರಾಮದ ಮುಖಂಡರಾದ ಶರಣಗೌಡ ಪಾಟೀಲ ಮಾತನಾಡಿ ಪರಿಶುದ್ಧ ಯೋಜನೆ ಗ್ರಾಮೀಣರಲ್ಲಿ ಜಾಗ್ರತಿ ಮೂಡಿಸಿದ್ದು ವಜ್ಜಲ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಜನರು ಶೌಚಾಲಯ ನಿರ್ಮಾಣ ಮಾಡುತ್ತಿದ್ದು ಬಡರಿಗೆ ಒಳ್ಳೇಯ ಅನುಕೂಲ ಕಲ್ಪಿಸಿದ್ದಾರೆ. ಇದರಿಂದ ರಸ್ತೆ ಬದಿ ಮಲಮೂತ್ರ ವಿಸರ್ಜನೆ ತಡೆದಂತಾಗುತ್ತದೆ. ಯೋಜನೆಯಡಿ ಗ್ರಾಮಿಣ ಜನರಲ್ಲಿ ಜಾಗ್ರತಿ ಮೂಡಿಸಿದ ಎಲ್ಲ ತಂಡದವರಿಗೂ ಅಭಿನಂದಿಸಿದರು.ತಾಲ್ಲೂಕು ಸಂಚಾಲಕ ಸೋಮಶೇಖರ ಶಾಬಾದಿ, ಸತೀಶ ಕುಮಾರ, ಸಂಜೀವರಡ್ಡಿ, ಅಂಬಣ್ಣ, ಮೋಹನ ಕುಲಕರ್ಣಿ ಇದ್ದರು. ಆರ್.ಸಿ.ಸಿ. ಹಾಕಿದ ಶೌಚಾಲಯಳಿಗೆ 8000 ಮತ್ತು ಇತರ                     ಶೌಚಾಲಗಳಿಗೆ 6000 ಅನುದಾನ ನೀಡಲಾಯಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry