`ಪ್ರತಿ ಲೀಟರ್‌ನ ಐದು ಪೈಸೆ ಕಲ್ಯಾಣ ಟ್ರಸ್ಟಿಗೆ'

ಭಾನುವಾರ, ಜೂಲೈ 21, 2019
26 °C
ಶಿಮುಲ್ ಅಧ್ಯಕ್ಷ ಜಗದೀಶ್ವರ್ ಘೋಷಣೆ

`ಪ್ರತಿ ಲೀಟರ್‌ನ ಐದು ಪೈಸೆ ಕಲ್ಯಾಣ ಟ್ರಸ್ಟಿಗೆ'

Published:
Updated:

ಶಿವಮೊಗ್ಗ: ಶಿಮುಲ್ ಸಂಸ್ಥೆಯಿಂದ ಮಾರಾಟವಾಗುವ ಪ್ರತಿ ಲೀಟರ್ ಹಾಲಿಗೆ ಐದು ಪೈಸೆಯಂತೆ ಹಣವನ್ನು ಕಲ್ಯಾಣ ಟ್ರಸ್ಟಿಗೆ ನೀಡುತ್ತಿದ್ದು, ಇದನ್ನು ವಿಮೆಯಲ್ಲಿ ತೊಡಗಿಸಲಾಗುತ್ತಿದೆ ಎಂದು ಶಿಮುಲ್ ಅಧ್ಯಕ್ಷ ಕೆ.ಎಲ್.ಜಗದೀಶ್ವರ್ ಹೇಳಿದರು.ತಾಲ್ಲೂಕಿನ ಹರಮಘಟ್ಟದಲ್ಲಿ ಸೋಮವಾರ ಶಿಮುಲ್ ಪ್ರಾಯೋಜಿತ ಕಲ್ಯಾಣ ಟ್ರಸ್ಟ್, ವಾಸನ್ ಐ ಕೇರ್ ಸಂಯುಕ್ತವಾಗಿ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಹಾಲು ಉತ್ಪಾದನೆ ಮತ್ತು ಮಾರಾಟಕ್ಕೆ ಸೀಮಿತವಾಗಿದ್ದ ಶಿಮುಲ್ ಸಂಸ್ಥೆ ತನ್ನ ಸದಸ್ಯರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಕಲ್ಯಾಣ ಟ್ರಸ್ಟ್ ಮೂಲಕ ರೈತರಿಗೆ ಬೇರೆ ಬೇರೆ ರೀತಿಯಿಂದ ನೆರವಾಗುತ್ತಿದೆ.

ಈ ಟ್ರಸ್ಟ್ ಅಸ್ತಿತ್ವಕ್ಕೆ ಬಂದು ಕೇವಲ ಒಂದು ವರ್ಷ ಮಾತ್ರವಾಗಿದ್ದು, ಈಗಾಗಲೇ ಇದರ ಮೂಲಕ ಯಾರೇ ಸದಸ್ಯರು ಮೃತಪಟ್ಟಲ್ಲಿ ಆ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಗುವುದು. ಸದಸ್ಯರ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಓದುತ್ತಿರುವ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಗುವುದು ಎಂದರು.ಶಿಮುಲ್ ಆಡಳಿತ ನಿರ್ದೇಶಕ ಇ.ಎಸ್.ಅಕ್ಕಿ ಮಾತನಾಡಿ, ಉತ್ತಮ ಅಂಕ ಗಳಿಸಿದವರಿಗೆ ಕೆಎಂಎಫ್ ವತಿಯಿಂದ 365 ದಿನ ಹಾಲು ನೀಡಲಾಗುವುದು. ಇದೇ ರೀತಿ ಕೆಎಂಎಫ್ ವತಿಯಿಂದ ಸದಸ್ಯರ ಮಕ್ಕಳಿಗೆ ಉಚಿತ ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಅಧ್ಯಕ್ಷರು, ನಿಧನ ಹೊಂದಿದ ಐದು ಸದಸ್ಯರ ಕುಟುಂಬಗಳಿಗೆ ತಲಾ ರೂ. 10 ಸಾವಿರ ಚೆಕ್ ವಿತರಿಸಿದರು. ಶಿಮುಲ್ ನಿರ್ದೇಶಕ ತುಂಬ್ರಮನೆ ಚಂದ್ರಶೇಖರ್, ತಾ.ಪಂ. ಸದಸ್ಯೆ ಗೀತಾ, ಹರಮಘಟ್ಟ ಗ್ರಾ.ಪಂ.ಅಧ್ಯಕ್ಷ ಪರಮೇಶ್ವರ್ ಉಪಸ್ಥಿತರಿದ್ದರು.ವಾಸನ್ ಐ ಕೇರ್‌ನ ಜಿ.ಎಸ್.ವೆಂಕಟೇಶ್ ರಾವ್ ನೇತೃತ್ವದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ ನಡೆಯಿತು.ಹರಮಘಟ್ಟ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಪಿ.ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ  ಚಂದ್ರಶೇಖರ್ ಸ್ವಾಗತಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry