ಪ್ರತಿ ಲೀ. ಹಾಲಿಗೆ ₨ 2 ವಿಶೇಷ ದರ

7
ಸಂಕ್ರಾಂತಿಗೆ ಕೋಮುಲ್ ಕೊಡುಗೆ

ಪ್ರತಿ ಲೀ. ಹಾಲಿಗೆ ₨ 2 ವಿಶೇಷ ದರ

Published:
Updated:

ಕೋಲಾರ: ಸಂಕ್ರಾಂತಿ ಹಬ್ಬ ಹೊಸ್ತಿಲಲ್ಲಿರುವ ಹೊತ್ತಿ­ನಲ್ಲಿ ಕೋಲಾರ ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟವು ರೈತರಿಗೆ ವಿಶೇಷ ಕೊಡುಗೆಯನ್ನು ಪ್ರಕಟಿಸಿದೆ. ರೈತರಿಂದ ಪಡೆಯುವ ಪ್ರತಿ ಲೀಟರ್ ಹಾಲಿಗೆ ₨ 2 ವಿಶೇಷ ದರವನ್ನು ನೀಡಲಿದೆ. ಈ ಕೊಡುಗೆ ಜ.1ರಿಂದ ಮಾ.31ರವರೆಗೆ ಜಾರಿಯಲ್ಲಿರುತ್ತದೆ ಎಂದು ಕೋಮುಲ್ ಅಧ್ಯಕ್ಷ ಕೆ.ಗುಡಿಯಪ್ಪ ತಿಳಿಸಿದ್ದಾರೆ.ನೂತನ ವರ್ಷದ ಪ್ರಾರಂಭದಲ್ಲಿ ಹಾಲಿನ ದರ ಪರಿಷ್ಕರಣೆ ಮಾಡುವ ಪದ್ಧತಿಯ ಬಗ್ಗೆ ಗುರುವಾರ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಪ್ರತಿ ಲೀಟರಿನಲ್ಲಿ ಶೇ.3.5 ರಿಂದ ಶೇ 3.7 ಜಿಡ್ಡಿನಾಂಶವಿರುವ ಹಾಲನ್ನು ಪೂರೈಸಿದವರಿಗೆ ಮಾತ್ರ ಈ ದರ ಅನ್ವಯವಾಗುತ್ತದೆ. ಮಾರುಕಟ್ಟೆಯಲ್ಲಿ ಹಾಲು ಉತ್ಪನ್ನಗಳ ದರ ಹೆಚ್ಚಳವಾಗಿದೆ.

ಜೊತೆಗೆ ಕ್ಷೀರಭಾಗ್ಯ ಯೋಜನೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಒಕ್ಕೂಟದ ಉತ್ಪನ್ನ­ಗಳಿಗೆ ಉತ್ತಮ ಮಾರಾಟ ದರ ಪ್ರಾಪ್ತವಾಗಿ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಕ್ಕೂಟದಲ್ಲಿ ಶೇಖರಣೆಯಾಗುತ್ತಿರುವ ಒಟ್ಟು ಹಾಲಿನಲ್ಲಿ ಶೇ. 63 ರಷ್ಟು ಮಾತ್ರ 8.5 ಕ್ಕಿಂತ ಹೆಚ್ಚಿಗೆ ಎಸ್ಎನ್ಎಫ್. ಅಂಶವನ್ನು ಹೊಂದಿದೆ. ಗುಣ­ಮಟ್ಟ­ದಲ್ಲಿ ಹೆಚ್ಚಿನ ಪ್ರಗತಿ ಸಾಧ್ಯವಾಗಿಲ್ಲ. ಆಹಾರ ಸುರಕ್ಷತಾ ಕಾಯಿದೆ ಅನ್ವಯ ಗುಣಮಟ್ಟದ ಹಾಲು ಶೇಖರಣೆಗೆ ಅತ್ಯಂತ ಪ್ರಾಮುಖ್ಯತೆ ಕೊಡುವುದು ಅನಿ­ವಾರ್ಯ.. ಹೀಗಾಗಿ  ಗುಣಮಟ್ಟದ ಹಾಲನ್ನು ಪೂರೈಸಬೇಕು ಎಂದು ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry