ಗುರುವಾರ , ನವೆಂಬರ್ 14, 2019
18 °C

ಪ್ರತ್ಯೇಕ ಅಪಘಾತ: ನಾಲ್ವರು ಸಾವು

Published:
Updated:

ಹಳೇಬೀಡು: ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ವರು ಮೃತಪಟ್ಟಿರುವ ಘಟನೆ ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.ಹರೀಶ್‌ನಾಯ್ಕ(35), ಆನಂದ(35), ಸಂದೀಪ(24) ಪವನ್(14) ಮೃತಪಟ್ಟವರು.ಹಾಸನ-ಬೇಲೂರು ರಸ್ತೆಯ ಹಾರೋಹಳ್ಳಿ ಗೇಟ್ ಬಳಿ ಎರಡು ಬೈಕುಗಳು ಮುಖಾ ಡಿಕ್ಕಿ ಹೊಡೆದು ಮೂವರು ಮೃತಪಟ್ಟಿದ್ದಾರೆ. ಹಾಸನದಿಂದ ಬೇಲೂರು ಕಡೆಗೆ ಹರೀಶ್ ನಾಯ್ಕ, ಆನಂದ ಬೈಕಿನಲ್ಲಿ ತೆರಳುತ್ತಿದ್ದರು, ಮತ್ತೊಂದು ಬೈಕಿನಲ್ಲಿ ಬೇಲೂರು ಕಡೆಯಿಂದ ಹಾಸನಕ್ಕೆ ಸಂದೀಪ ಹಾಗೂ ಪ್ರವೀಣ ಹೋಗುತ್ತಿದ್ದಾಗ ಎರಡು ಬೈಕುಗಳು ಪರಸ್ಪರ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಹರೀಶ್‌ನಾಯ್ಕ, ಸಂದೀಪ ಸ್ಥಳದಲ್ಲಿಯೇ ಮೃತಪಟ್ಟರೆ, ಆನಂದ ಆಸ್ಪತ್ರೆಯಲ್ಲಿ ಮೃತಪಟ್ಟರು. ಗಾಯಾಳು ಪ್ರವೀಣ ಅವರನ್ನು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.ಮತ್ತೊಂದು ಪ್ರಕರಣದಲ್ಲಿ ಮಣ್ಣು ತುಂಬಿದ್ದ ಟ್ರ್ಯಾಕ್ಟರ್‌ವೊಂದು ಪಾದಚಾರಿಗೆ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟಿರುವ ಘಟನೆ ಮಂಗಳವಾರ ಸಂಜೆ ಅಡಗೂರು ಬಳಿಯ ಆಲದಹಳ್ಳಿ ನಡೆದಿದೆಆಲದಹಳ್ಳಿ ಪವನ್(14) ಮೃತಪಟ್ಟವರು. ಇವರು ತೋಟಕ್ಕೆ ಹೋಗುತ್ತಿದ್ದಾಗ ಅಡಗೂರು ಕೆರೆಯಿಂದ ಮಣ್ಣು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.ಹಳೆಬೀಡು ಪಿ.ಎಸ್.ಐ. ರವಿಕುಮಾರ್ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)