ಪ್ರತ್ಯೇಕ ಅಪಘಾತ: ಬೆಂಗಳೂರಿನ ಇಬ್ಬರ ಸಾವು

7

ಪ್ರತ್ಯೇಕ ಅಪಘಾತ: ಬೆಂಗಳೂರಿನ ಇಬ್ಬರ ಸಾವು

Published:
Updated:

ಹೊಸಕೋಟೆ: ನಂದಗುಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಬೆಂಗಳೂರಿನ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದು, ಇತರೆ ಮೂವರು ಗಾಯಗೊಂಡಿದ್ದಾರೆ.ಕೋಲಾರ ರಸ್ತೆಯ ಗಂಗಾಪುರ ಗ್ರಾಮದ ಬಳಿ ಲಾರಿ ಹಾಗೂ ಕಾರೊಂದರ ಮಧ್ಯೆ ನಡೆದ ಅಪಘಾತ­ದಲ್ಲಿ ಕಾರಿನ ಚಾಲಕ ಬೆಂಗಳೂರು ಆರ್‌.ಟಿ.ನಗರದ ಆರ್‌.ರಾಜು (42) ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಬಿಲ್ಡಿಂಗ್‌ ಕಂಟ್ರಾಕ್ಟರ್‌ ಆದ ರಾಜು ತಿರುಪತಿ­ಯಲ್ಲಿ ಬುಧವಾರ ನಡೆದ ಮಗಳ ವಿವಾಹ ಸಮಾರಂಭ ಮುಗಿಸಿಕೊಂಡು ಹಿಂದಿರುಗುತ್ತಿದಾಗ ಈ ಅವಘಡ ಸಂಭವಿಸಿದೆ.ಮತ್ತೊಂದು ಪ್ರಕರಣದಲ್ಲಿ ಚಿಂತಾ-­ಮಣಿ ರಸ್ತೆಯ ಕರಪನಹಳ್ಳಿ ಸಮೀಪ ಕಾರು ಹಾಗೂ ಬೈಕ್‌ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಬೆಂಗಳೂರು ಬಿಟಿಎಂ ಬಡಾವಣೆಯ ಎಸ್‌.ಬಾಬು (40) ಸ್ಥಳದಲ್ಲೇ ಮೃತಪಟ್ಟಿದಾರೆ. ಹಿಂಬದಿ ಸವಾರನಿಗೆ ಸಣ್ಣಪುಟ್ಟ ಗಾಯ­ಗಳಾಗಿವೆ. ಅವರಿಬ್ಬರೂ ಕೈವಾರದಲ್ಲಿದ್ದ ವಿವಾಹ ಸಮಾರಂಭಕ್ಕೆ ಹೋಗು­ತ್ತಿದಾಗ ಈ ಅವಘಡ ನಡೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry