ಶುಕ್ರವಾರ, ಮೇ 27, 2022
30 °C

ಪ್ರತ್ಯೇಕ ಅಪಘಾತ: ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ಇಲ್ಲಿನ ಹೆದ್ದಾರಿಯಲ್ಲಿ ಭಾನುವಾರ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಯುವಕನೊಬ್ಬ ಸೇರಿದಂತೆ ಒಬ್ಬರು ವೃದ್ಧರು ಮೃತಪಟ್ಟಿದ್ದಾರೆ. ಬೆಂಗಳೂರು ರಸ್ತೆಯ ಬೂದಿಗೆರೆ ಕ್ರಾಸ್ ಬಳಿಯ ಮೇಲು ಸೇತುವೆ ಮೇಲೆ ಹೋಗುತ್ತಿದ್ದ ಬೈಕ್‌ಗೆ ಮತ್ತೊಂದು ಬೈಕ್ ಹಿಂಬದಿಯಿಂದ ಡಿಕ್ಕಿ ಹೊಡೆಯಿತು. ಮುಂದಿದ್ದ ಬೈಕ್‌ನ ಸವಾರ ಚಿಕ್ಕ ಬೈರತಿಯ ದಶರಥರಾವ್ (64) ಅವರಿಗೆ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗೆ ಬಿದ್ದರು. ಆಗ ತಲೆಗೆ ತೀವ್ರ ಪೆಟ್ಟಾಗಿ ಅವರು ಸ್ಥಳದಲ್ಲೇ ಮೃತಪಟ್ಟರು. ಹಿಂದೆ ಕುಳಿತಿದ್ದ ಪತ್ನಿ ಕಸ್ತೂರಿಬಾಯಿ ಅವರಿಗೆ ಗಾಯಗಳಾಗಿವೆ.ಈ ಅಪಘಾತಕ್ಕೆ ಕಾರಣನಾದ ಬೈಕ್ ಸವಾರ ವಾಹನ ನಿಲ್ಲಿಸದೆ ಪರಾರಿ ಆಗಿದ್ದಾನೆ. ದಶರಥರಾವ್ ಹೊಸಕೋಟೆಯಲ್ಲಿ ತಮ್ಮ ಮಗಳ ಮನೆಗೆ ಬಂದಿದ್ದು ಅಲ್ಲಿಂದ ಹಿಂದಿರುಗುತ್ತಿದ್ದಾಗ ಈ ಅಪಘಾತ ನಡೆದಿದೆ. ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಮತ್ತೊಂದು ಪ್ರಕರಣದಲ್ಲಿ ಅಲಸೂರಿನ ಗೋಪಾಲ್ ಎಂಬುವವರ ಮಗ ಕಿರಣ್ (17) ಎಂಬಾತ ಓಡಿಸುತ್ತಿದ್ದ ಸ್ಕೂಟರ್ ನಿಯಂತ್ರಣ ತಪ್ಪಿ ಕೋಡಿ ಸಮೀಪ ನೂತನವಾಗಿ ನಿರ್ಮಿಸುತ್ತಿರುವ ಸುಂಕ ವಸೂಲಿ ಕೇಂದ್ರದ ಬಳಿಯ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದುದರಿಂದ ಆತನಿಗೆ ತೀವ್ರ ಪೆಟ್ಟಾಯಿತು. ಗಾಯಳುವನ್ನು ಹೊಸಕೋಟೆಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ.ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಯಾದ ಕಿರಣ್ ಹೊಸಕೋಟೆಯಲ್ಲಿನ ಸಂಬಂಧಿಕರ ಮನೆಗೆ ಬಂದಿದ್ದು ಅಲ್ಲಿಂದ ಹಿಂದಿರುಗುತ್ತಿದ್ದಾಗ ಈ ಅಪಘಾತ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.