ಮಂಗಳವಾರ, ಮೇ 11, 2021
26 °C
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ: ಸುಪ್ರೀಂ ಕೋರ್ಟ್ ಅಭಿಮತ

`ಪ್ರತ್ಯೇಕ ತನಿಖೆಯಿಂದ ಅಡ್ಡಿಯಾಗುತ್ತಿಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣವನ್ನು ಭೇದಿಸುತ್ತಿರುವ ಮುಂಬೈ ಹಾಗೂ ದೆಹಲಿ ಪೊಲೀಸರ ಪ್ರತ್ಯೇಕ ತನಿಖೆಗಳಿಂದ ವಿಚಾರಣೆಗೆ ಯಾವುದೇ ಅಡ್ಡಿಯಾಗುತ್ತಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.ಮುಂಬೈ ಮೂಲದ ಶರ್ಮಿಳಾ ಘುಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜ್ಞಾನ ಸುಧಾ ಮಿಶ್ರಾ  ಹಾಗೂ ಮದನ್ ಬಿ ಲೋಕೂರ್ ಅವರನ್ನೊಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.ಉನ್ನತ ವ್ಯಕ್ತಿಗಳ ಹಾಗೂ ರಾಜಕಾರಣಿಗಳ ಪ್ರಭಾವದಿಂದ ತನಿಖೆ ದಿಕ್ಕು ತಪ್ಪುವ ಸಾಧ್ಯತೆ ಇದೆ. ಹಾಗಾಗಿ ತನಿಖೆಯನ್ನು ಪೊಲೀಸ್ ತನಿಖಾ ಸಂಸ್ಥೆಗಳಿಂದ ಸಿಬಿಐಗೆ ವರ್ಗಾಯಿಸುವಂತೆಯೂ ಆ ಅರ್ಜಿಯಲ್ಲಿ ಕೋರಲಾಗಿತ್ತು.`ದೆಹಲಿ ಹಾಗೂ ಮುಂಬೈ ಪೊಲೀಸರು ನಡೆಸುತ್ತಿರುವ ಪ್ರತ್ಯೇಕ ತನಿಖೆಗಳಿಂದ ಅಡ್ಡಿ ಉಂಟಾಗುತ್ತಿದೆ ಎಂಬುದರ ಬಗ್ಗೆ ನಿಮ್ಮ (ಅರ್ಜಿದಾರ) ವಾದದಿಂದ ನಮಗೆ ಸ್ವಲ್ಪವೂ ಮನವರಿಕೆ ಆಗಿಲ್ಲ' ಎಂದೂ ಪೀಠ ಹೇಳಿದೆ. ಅಲ್ಲದೇ, ಪೊಲೀಸರ ತನಿಖೆಯನ್ನು ಗಮನಿಸಿದ ನಂತರ ಹೆಚ್ಚುವರಿ ಪ್ರಮಾಣಪತ್ರ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿತು.`ತನಿಖೆ ತುಂಬಾ ಕವಲೊಡೆದಿದೆ. ಅದನ್ನು ಪ್ರತಿನಿತ್ಯ ಅಥವಾ ಗಂಟೆಗಳ ಆಧಾರದಲ್ಲಿ ಪರಿಶೀಲಿಸಲು ಸಾಧ್ಯವಿಲ್ಲ. ತನಿಖೆ ಮಾಡಲು ಅವರಿಗೆ ಸ್ವಲ್ಪ ಸಮಯ ಕೊಡಿ' ಎಂದು ಹೇಳಿದ ಪೀಠ, ವಿಚಾರಣೆಯನ್ನು ಜುಲೈ 23ಕ್ಕೆ ಮುಂದೂಡಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.