ಪ್ರತ್ಯೇಕ ತೆಲಂಗಾಣ ಮುಂದೂಡಿದ ಲೋಕಸಭಾ ಕಲಾಪ

7

ಪ್ರತ್ಯೇಕ ತೆಲಂಗಾಣ ಮುಂದೂಡಿದ ಲೋಕಸಭಾ ಕಲಾಪ

Published:
Updated:

ನವದೆಹಲಿ  (ಪಿಟಿಐ): ಬುಧವಾರ ಬೆಳಿಗ್ಗೆ ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಪ್ರತ್ಯೇಕ ರಾಜ್ಯ ರಚನೆಗೆ ಒತ್ತಾಯಿಸಿ ಆಂಧ್ರ ಪ್ರದೇಶದ ತೆಲಂಗಾಣ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದ ಸಂಸದರು, ಭಿತ್ತಿಪತ್ರಗಳನ್ನು ಹಿಡಿದುಕೊಂಡು ಘೋಷಣೆ ಕೂಗಿ ಗದ್ದಲವೆಸಗಿ ಕಲಾಪಕ್ಕೆ ಅಡ್ಡಿಪಡಿಸಿದ ಘಟನೆ ನಡೆಯಿತು.

ಟಿಆರ್ಎಸ್ ಮತ್ತು ಟಿಡಿಪಿ ಸಂಸದರ ಜೊತೆಗೆ ಕಾಂಗ್ರೆಸ್ ಸಂಸದರೂ ಈ ಗದ್ದಲದಲ್ಲಿ ಸೇರಿಕೊಂಡಿದ್ದರು. ಟಿಆರ್ಎಸ್ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಅವರ ಸಹೋದ್ಯೋಗಿ ಎಂ.ವಿಜಯಶಾಂತಿ ಅವರು ಬೇಡಿಕೆಗೆ ಆಗ್ರಹಸಿ ಸದನದ ಬಾವಿಗೆ ನುಗ್ಗಿದ ಪ್ರಸಂಗವೂ ನಡೆಯಿತು.

ಪ್ರತಿಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅವರು, ತೆಲಂಗಾಣ ಬೇಡಿಕೆಗೆ ಪೂರಕವಾಗಿ ಸ್ಪಂದಿಸುತ್ತಾ,  ~ಜನತೆಯ ಭಾವನೆಯನ್ನು ಗೌರವಿಸಬೇಕಾದ ಸಂಗತಿ ಇದು~  ಸ್ವಲ್ಪ ಸಮಯ ಸದನದಲ್ಲಿದ್ದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಗಮನಕ್ಕೆ ತಂದರು

 ಈ ಗದ್ದಲದ ಕಾರಣ ಮಧ್ಯಾಹ್ನ  ಎರಡು ಗಂಟೆಯವರೆಗೆ ಸದನವನ್ನು ಮೂರುಬಾರಿ ಮುಂದೂಡಬೇಕಾಯಿತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry