ಶನಿವಾರ, ಜೂನ್ 12, 2021
28 °C

ಪ್ರತ್ಯೇಕ ಮೀಸಲಾತಿಗೆ ಮುಸ್ಲಿಮರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಮುಸ್ಲಿಮರಿಗೆ ಪ್ರತ್ಯೇಕ ಮೀಸಲಾತಿ ನೀಡಲು ಒತ್ತಾಯಿಸಿ ಮುಸ್ಲಿಂ ಇತ್ಯಾಹಾದ್, ಪ್ರತ್ಯೇಕ ಮೀಸಲಾತಿ ಹೋರಾಟ ಸಮಿತಿ ಸದಸ್ಯರು ಶುಕ್ರವಾರ ನಗರದಲ್ಲಿ ಪ್ರತಿಭಟನಾ ಜಾಥಾ ನಡೆಸಿದರು.ಮುಸ್ಲಿಮರಿಗೆ ರಾಜಕೀಯವಾಗಿ ಪ್ರತ್ಯೇಕ ಮೀಸಲಾತಿ ನೀಡಬೇಕು. ಜನಸಂಖ್ಯೆಯ ಆಧಾರದ ಮೇಲೆ ವಿಧಾನಸಭೆ, ಲೋಕಸಭೆ, ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಪುರಸಭೆ, ಪಟ್ಟಣ ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆಗಳಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.ಮುಸ್ಲಿಮರನ್ನು ಮುಖ್ಯವಾಹಿನಿಗೆ ತರಲು ರಾಷ್ಟ್ರದ ಎಲ್ಲ ರಾಜಕೀಯ ಪಕ್ಷಗಳು, ಎಲ್ಲ ಜಾತ್ಯತೀತ ಸಂಘಟನೆಗಳು ಪ್ರೋತ್ಸಾಹ ನೀಡಬೇಕು ಎಂದು ಕೋರಿದರು.ಪ್ರತ್ಯೇಕ ಮೀಸಲಾತಿ ನೀಡುವುದಕ್ಕಾಗಿ ಕಾನೂನು ರೂಪಿಸಲು ಸಂಘ-ಸಂಸ್ಥೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಪ್ರಭಾವ ಬೀರಬೇಕು. ಕೇಂದ್ರ ಸರ್ಕಾರ ರಾಜೇಂದ್ರ ವರ್ಮಾ ಸಾಚಾರ್ ಹಾಗೂ ರಂಗನಾಥ್ ಮಿಶ್ರಾ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೆ ತಂದು ಬಡತನ ರೇಖೆಗಿಂತ ಕೆಳಗಿರುವ ಮುಸ್ಲಿಮರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ರಾಜ್ಯದಲ್ಲಿ ಉರ್ದು ದ್ವಿತೀಯ ಭಾಷೆಯಾಗಬೇಕು. ಶೇ. 15 ಉರ್ದು ಮಾತನಾಡುವ ಭಾಗಗಳಲ್ಲಿ ಉರ್ದು ಶಾಲಾ-ಕಾಲೇಜು, ಅಂಗನವಾಡಿಗಳನ್ನು ತೆರೆಯಬೇಕು. ಎಲ್ಲ ಬೇಡಿಕೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಮದೀನ ಆಟೋ ನಿಲ್ದಾಣದಿಂದ ಪ್ರತಿಭಟನಾ ಜಾಥಾ ಹೊರಟು ಚಾಮರಾಜಪೇಟೆ ಮತ್ತಿತರ ಭಾಗಗಳಲ್ಲಿ ಸಂಚರಿಸಿ, ನಂತರ ಜಿಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಮೀಸಲಾತಿ ಸಮಿತಿ ಅಧ್ಯಕ್ಷ ದುಮ್ಮಿ ದಾದಾಪೀರ್, ಮುಖಂಡರಾದ ಕೆ.ಕೆ. ಮಹಮದ್ ರಫೀಕ್, ನೂರ್ ಅಹಮದ್, ಇಮ್ತಿಯಾಜ್ ಹುಸೇನ್, ತಾರಿಕ್ ನತಾಶ, ನೂರ್ ಅಹಮದ್ ಭದ್ರಾವತಿ, ರಸೂಲ್ ಖಾನ್, ಅಹಮದ್ ಅಲಿ, ಮೌಲಾ ಸಾಹೇಬ್, ಅಶ್ರಫಿ, ಖಾದರ್‌ಖಾನ್, ಡಾ.ಸಮೀವುಲ್ಲಾ ಖಾನ್, ಬಿ.ಎಂ. ಸತೀಶ್, ರೆಹಮಾನ್, ಇಸ್ಮಾಯಿಲ್ ಮತ್ತಿತರರು ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.