ಪ್ರತ್ಯೇಕ ರಾಜ್ಯ ರಚನೆ ಕತ್ತಿ ಪುನರುಚ್ಚಾರ

7

ಪ್ರತ್ಯೇಕ ರಾಜ್ಯ ರಚನೆ ಕತ್ತಿ ಪುನರುಚ್ಚಾರ

Published:
Updated:

ಬೆಳಗಾವಿ:  `ರಾಷ್ಟ್ರದಲ್ಲಿ 2020ರ ಹೊತ್ತಿಗೆ 50 ಸಣ್ಣ ರಾಜ್ಯಗಳಾಗಬಹುದು. ಆಗ ಉತ್ತರ ಕರ್ನಾಟಕ ಸಹ ಪ್ರತ್ಯೇಕ ರಾಜ್ಯವಾಗಬಹುದು. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ರಾಜ್ಯ ಆಗಬೇಕು' ಎಂದು ಕೃಷಿ ಸಚಿವ ಉಮೇಶ ಕತ್ತಿ ಪುನರುಚ್ಚರಿಸಿದರು.ಸುವರ್ಣ ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, `ಪ್ರತ್ಯೇಕ ರಾಜ್ಯವಾದರೂ ನಾವು ಕನ್ನಡಿಗರಾಗಿಯೇ ಉಳಿಯುತ್ತೇವೆ. ಪ್ರತ್ಯೇಕ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ನನಗೆ ಇಲ್ಲ.ಅಖಂಡ ಕರ್ನಾಟಕದ ಮುಖ್ಯಮಂತ್ರಿಯಾಗುವ ಬಯಕೆ ಇದೆ. ನನ್ನ ಮಗ ಪ್ರತ್ಯೇಕ ರಾಜ್ಯದ ಮುಖ್ಯಮಂತ್ರಿಯಾಗಬಹುದು' ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry