ಬುಧವಾರ, ಜೂನ್ 23, 2021
29 °C

ಪ್ರತ್ಯೇಕ ವಿದರ್ಭಕ್ಕೆ ಆಗ್ರಹಿಸಿ ಚುನಾವಣೆಗೆ ಬಹಿಷ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಡ್‌ಚಿರೋಲಿ (ಮಹಾರಾಷ್ಟ್ರ), (ಪಿಟಿಐ): ಪ್ರತ್ಯೇಕ ವಿದರ್ಭ ರಾಜ್ಯ­ಕ್ಕಾಗಿ ಒತ್ತಡ ಹೇರಲು ಜಿಲ್ಲೆಯ ಎಟಪಲ್ಲಿ ತಾಲ್ಲೂಕಿನ ಸುಮಾರು 47 ಗ್ರಾಮಗಳು ಈ ಬಾರಿ ಲೋಕಸಭೆ ಚುನಾವಣೆಗೆ ಬಹಿಷ್ಕಾರ ಹಾಕಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.ಈ ಸಂಬಂಧ ಬುಧವಾರ ಸಭೆ ನಡೆಸಿ ಗ್ರಾಮಸ್ಥರು ಈ ನಿರ್ಧಾರಕ್ಕೆ ಬಂದಿ­ದ್ದಾರೆ. ರಾಷ್ಟ್ರೀಯ ಜನಹಿತ­ವಾದಿ ಯುವ ಸಮಿತಿ ಪದಾಧಿ­ಕಾರಿ­ಗಳು ಸುದ್ದಿ­­­ಗೋಷ್ಠಿಯಲ್ಲಿ ಈ ವಿಷಯ  ತಿಳಿಸಿ­ದರು. ಅಲ್ಲದೇ ಅವರು ಈ ಸಂಬಂಧ ಜಿಲ್ಲಾಧಿ­ಕಾರಿಗೆ ಮನವಿ ಕೂಡ ಸಲ್ಲಿಸಿದರು.‘ಎಟಪಲ್ಲಿ ತಾಲ್ಲೂಕಿನ ಕುಗ್ರಾಮ­ಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸ್ಪಂದಿ­­ಸುತ್ತಿಲ್ಲ. ಬುಡಕಟ್ಟು ಸಮು­ದಾ­ಯ­­­ದವರು  ವಿವಿಧ ಅಭಿವೃದ್ಧಿ ಯೋಜ­ನೆ­­­­ಗಳಿಂದ ವಂಚಿತರಾಗಿದ್ದಾರೆ. ಈ ಎಲ್ಲ ಕಾರಣಗಳಿಂದ ಈ ಭಾಗದ  ಗ್ರಾಮ­ಸ್ಥರು ಲೋಕಸಭೆ ಚುನಾವಣೆಗೆ ಬಹಿ­ಷ್ಕಾರ ಹಾಕಿದ್ದಾರೆ’ ಎಂದು  ಸಮಿತಿ ಸಂಸ್ಥಾ­ಪಕ ಸುರೇಶ್‌್ ಬರ್ಸಗಡೆ ಸುದ್ದಿಗಾರರಿಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.