ಶುಕ್ರವಾರ, ಏಪ್ರಿಲ್ 16, 2021
22 °C

ಪ್ರಥಮ ಸ್ವಾತಂತ್ರ್ಯ ಆಚರಣೆಯ ಕಥೆ ಹೇಳಿದ ಅಜ್ಜ

ಪ್ರಜಾವಾಣಿ ವಾರ್ತೆ ಪ್ರದೀಪ ಮೇಲಿನಮನಿ Updated:

ಅಕ್ಷರ ಗಾತ್ರ : | |

ಚನ್ನಮ್ಮನ ಕಿತ್ತೂರು: `ಕಟ್ಟಿಗೆಗೆ ರಾಷ್ಟ್ರ ಧ್ವಜ ಕಟ್ಟಿಕೊಂಡು ಊರಲ್ಲಿ `ಭಾರತ್ ಮಾತಾಕೀ ಜೈ, ವಂದೇ ಮಾತರಂ~ ಉದ್ಘೋಷಗಳ ಹಾಕುತ್ತ ಸಾಗಿದೆವು. ಹೊಸ ಜಗತ್ತನ್ನು ದರ್ಶನ ಮಾಡಿದ ಅನುಭವ ನಮ್ಮದಾಗಿತ್ತು.

ದೇಶಕ್ಕೆ ಹಾಗೂ ದೇಶದ ಜನರಿಗೆ ಇನ್ಮುಂದೆ ಒಳ್ಳೆಯದಾಗುತ್ತದೆ ಎಂಬ ಭಾವ ಮೂಡಿತ್ತು. ಊರ ಪ್ರಮುಖರಾದ ಚಿಂತಾಮಣಿಗೌಡ್ರು, ಬಸನಗೌಡ್ರು ಪಾಟೀಲ ಅವರ ಹಿರಿತನದಲ್ಲಿ ಹತ್ತಾರು ಜನರು ಅಂದಿನ ಆಚರಣೆಗೆ ಸಾಕ್ಷಿಯಾಗಿದ್ದೆವು...~ಬ್ರಿಟಿಷರ ವಿರುದ್ಧ ಅವಿರತ ಹೋರಾಟ ಮಾಡಿ ದಕ್ಕಿಸಿಕೊಂಡ ಸ್ವಾತಂತ್ರ್ಯೋತ್ಸವದ ಪ್ರಥಮ ಆಚರಣೆಯ ಈ ಕಥೆಯನ್ನು ಅಜ್ಜ ಎಳೆ, ಎಳೆಯಾಗಿ ಮಕ್ಕಳ ಎದುರು ಹೇಳುತ್ತಿದ್ದರೆ ಅವರ ಕಣ್ಣುಗಳಲ್ಲಿ ಕುತೂಹಲ ಮಡುವು ಗಟ್ಟಿತ್ತು. ದೊಡ್ಡವರ ಎದೆಯಲ್ಲಿ ಕೆಚ್ಚು ಮನೆ ಮಾಡಿದಂತಿತ್ತು...ಸ್ವಾತಂತ್ರ್ಯೋತ್ಸವದ ಅರವತ್ತೈ ದನೆಯ ವರ್ಷಾಚರಣೆಯ ಪೂರ್ವ ಸಿದ್ಧತೆಯ ಸಡಗರದಲ್ಲಿದ್ದ ಇಲ್ಲಿಯ ಗುರುವಾರ ಪೇಟೆಯ ಸರ್ಕಾರಿ ಪ್ರಾಥಮಿಕ ಕನ್ನಡ ಶಾಲೆಯ ಮಕ್ಕಳಿಗೆ ಪ್ರಥಮ ಆಚರಣೆಯ ಕಥೆಯನ್ನು, 1947ರಲ್ಲಿ ಶಿಕ್ಷಕರಾಗಿ ಸೇವೆ ಆರಂಭಿ ಸಿದ್ದ ತುರಮರಿ ಗ್ರಾಮದ 84 ವರ್ಷ ವಯೋಮಾನದ ಬಸಪ್ಪ ವೀರಭದ್ರಪ್ಪ ನೇಸರಗಿ ಅವರ ಮಾತುಗಳಿಂದ ಕೇಳುವ ಅವಕಾಶವನ್ನುಮಂಗಳವಾರ ಕಲ್ಪಿಸಿದ್ದವರು ಶಾಲೆಯ ಮುಖ್ಯಾ ಧ್ಯಾಪಕ ಎಂ. ಎಫ್. ಜಕಾತಿ ಅವರು.`ಗ್ರಾಮೀಣ ಪ್ರದೇಶಕ್ಕೆ ಸುದ್ಧಿ ತಲುಪಿಸುವ ಏಕೈಕ ಅಂದಿನ ವೇಗದ ಸಂಪರ್ಕ ಎಂದರೆ ಊರಿನ ಪೊಲೀಸ್ ಪಾಟೀಲ್‌ರಾಗಿದ್ದರು. ಹೀಗೆ ಸುದ್ಧಿ ತಲುಪಿದ ತಕ್ಷಣ, ತುರಮರಿ ಗ್ರಾಮ ದಲ್ಲಿದ್ದ ಶಾಲೆಗೆ ಅದು ರವಾನೆ ಯಾಯಿತು. ಆ ಆಚರಣೆಯ ಮಂ ಜಾನೆ ಅಂಥಾದಿತ್ತು...~ ಎಂದು ಅಂತ ರ್ಮುಖಿಯಾದರು ಬಸಪ್ಪ ಜ್ಜನವರು.ಕನಸು ನೂರು:

ದೇಶದ ಪ್ರತಿ ಹಳ್ಳಿ, ಹಳ್ಳಿಗಳಲ್ಲೂ ಗಾಂಧೀಜಿ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವ ಇತ್ತು. ಕಾಗದದ ಜೇಂಡಾ ಹಿಡಿದು ಕುಣಿದಾಡಿದವರೆಷ್ಟು ಜನರೋ. ಸ್ವಾತಂತ್ರ್ಯ ಬಂದ ನಂತರ ನಾಡಿಗೆ, ಜನಕ್ಕೆ ಒಳ್ಳೆಯದಾಗುತ್ತದೆ ಎಂಬ ಕನಸು ನನ್ನಂಥವರಲ್ಲಿ ಗರಿಗೆದರಿತ್ತು. ಆದರೆ, ಇಂದು ನೋಡಿದರೆ ದೇಶಾಭಿಮಾನ ದೂರವಾಗುತ್ತಿದೆ. ನೈತಿಕ ಮೌಲ್ಯಕ್ಕೆ ತೀವ್ರವಾದ ಹೊಡೆತ ಬೀಳುತ್ತಿದೆ. ಪಾಶ್ಚತ್ಯ ಸಂಸ್ಕೃತಿ ದೇಶದ ಪ್ರಗತಿಗೆ ಅಡ್ಡಿಯಾಗುತ್ತಿದೆ~ ಎಂದು ಅಜ್ಜ ವಿಷಾದ ಪಟ್ಟರು.`ಸ್ವಾತಂತ್ರ್ಯದ ಸವಿರುಚಿ ಊಟ ಮಾಡಿಲ್ಲ ಅಂತಿಲ್ಲ. ಅದನ್ನೂ ಅನುಭವಿ ಸಿದ್ದೇವೆ. ಶಿಕ್ಷಣದಲ್ಲಿ ಪ್ರಗತಿಯಾಗಿದೆ. ದಿಲ್ಲಿಯಿಂದ ಹಳ್ಳಿಯವರೆಗೆ ದೇಶ, ಭಾಷೆ, ಸಂಸ್ಕೃತಿ ಬಗ್ಗೆ ಜಾಗೃತಿ ಉಂಟಾಗಿದೆ. ಜೀವನ ಮಟ್ಟ ಎತ್ತರ ಕ್ಕೇರಿದೆ~ ಎಂದು ಆರು ದಶಕಗಳ ಪಯಣವನ್ನು ಅವರು ವಿಶ್ಲೇಷಿಸಿದರು.ಉರ್ದು ಶಾಲೆಯ ಮುಖ್ಯಾಧ್ಯಾಪಕ ಜಿ. ಪಿ. ಉಮರ್ಜಿ, ಎಂ. ಎಫ್. ಜಕಾತಿ ಹಾಗೂ ಶಿಕ್ಷಕ ಬಳಗದವರು ಸೇರಿ ನೇಸರಗಿ ಗುರುಗಳಿಗೆ ಆತ್ಮೀಯವಾಗಿ ಸತ್ಕರಿಸಿದರು. ಅಂಬಡಗಟ್ಟಿ ಸಿಆರ್‌ಪಿ ಎಂ. ಆರ್. ಪಾಟೀಲ ಇನ್ನಿತರರು ಉಪಸ್ಥಿತರಿದ್ದರು.

   

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.