ಪ್ರಥಮ ಹಂತ ಮುಗಿಸಿದ ಯಾರೇ ಕೂಗಾಡಲಿ

ಭಾನುವಾರ, ಮೇ 26, 2019
31 °C

ಪ್ರಥಮ ಹಂತ ಮುಗಿಸಿದ ಯಾರೇ ಕೂಗಾಡಲಿ

Published:
Updated:

ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸುತ್ತಿರುವ `ಯಾರೇ ಕೂಗಾಡಲಿ~ ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ.18 ದಿನ ನಡೆದ ಚಿತ್ರೀಕರಣದಲ್ಲಿ ಪುನೀತ್‌ ರಾಜ್‌ಕುಮಾರ್, ಯೋಗೀಶ್, ಭಾವನಾ, ಸಾಧುಕೋಕಿಲ, ಸಿಂಧು ಲೋಕನಾಥ್ ಭಾಗವಹಿಸಿದ್ದರು.  ನಗರದ ಸುತ್ತಮುತ್ತ ಚಿತ್ರದ ಹಲವು ದೃಶ್ಯಗಳಿಗೆ ಕ್ಯಾಮೆರಾ ಹಿಡಿದಿದ್ದು ಸುಕುಮಾರ್.ದ್ವಿತೀಯ ಹಂತದ ಚಿತ್ರೀಕರಣವು ಈ ತಿಂಗಳ 20 ರಿಂದ ಆರಂಭವಾಗಲಿದೆ ಎಂದು ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ತಿಳಿಸಿದ್ದಾರೆ. ಚಿತ್ರಕ್ಕೆ ಗುರುಪ್ರಸಾದ್ ಸಂಭಾಷಣೆ ರಚಿಸಿದ್ದು, ಹರಿಕೃಷ್ಣ ಸಂಗೀತ ನೀಡಿದ್ದಾರೆ.ನಾಗೇಂದ್ರ, ಆಶಾರಾಣಿ, ವರ್ಷಕೃಷ್ಣ, ಚಂದ್ರು, ಅಚ್ಯುತರಾವ್, ಲಕ್ಷ್ಮೀಹೆಗ್ಡೆ, ರಾಕೇಶ್ ಅಡಿಗ, ರವಿಶಂಕರ್, ಅಚ್ಯುತ್‌ಕುಮಾರ್, ಸಂದೀಪ್, ಅಖಿಲಾ, ಮುಂತಾದವರು ತಾರಾಗಣದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry