ಪ್ರದರ್ಶನದ ಬಗ್ಗೆ ಕುಕ್ ಮೆಚ್ಚುಗೆ

7

ಪ್ರದರ್ಶನದ ಬಗ್ಗೆ ಕುಕ್ ಮೆಚ್ಚುಗೆ

Published:
Updated:

ನಾಗಪುರ: ಈ ಪ್ರವಾಸದಲ್ಲಿ ಇಂಗ್ಲೆಂಡ್ ತಂಡದ ಆಟಗಾರರು ನೀಡುತ್ತಿರುವ ಪ್ರದರ್ಶನ ಹಾಗೂ ಅವರ ಸ್ವಭಾವದ ಬಗ್ಗೆ ನಾಯಕ ಅಲಸ್ಟೇರ್ ಕುಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.`ಮೊದಲ ಪಂದ್ಯದಲ್ಲಿ ನಾವು ಸೋಲು ಕಂಡೆವು. ಆದರೆ ಆ ಸೋಲಿನಿಂದ ಯಾರೂ ನಿರಾಶೆಗೆ ಒಳಗಾಗಲಿಲ್ಲ. ಬದಲಾಗಿ ಪುಟಿದೇಳುವ ಮನೋಭಾವ ಮೂಡಿತು. ಆ ಬಳಿಕ ಉತ್ತಮ ಆಟ ತೋರುತ್ತಿದ್ದಾರೆ' ಎಂದು ಅವರು ನುಡಿದಿದ್ದಾರೆ.`ನಮ್ಮ ಪಾಲಿಗೂ ಗುರುವಾರ ಆರಂಭವಾಗಲಿರುವ ಪಂದ್ಯ ತುಂಬಾ ಮುಖ್ಯವಾಗಿದೆ. ಹಿಂದಿನ ಪಂದ್ಯಗಳಲ್ಲಿ ತೋರಿದ ಆಟವನ್ನು ಇಲ್ಲೂ ಮುಂದುವರಿಸಬೇಕು.  ಗೆಲುವಷ್ಟೇ ನಮ್ಮ ಉದ್ದೇಶ' ಎಂದು ಕುಕ್ ಹೇಳಿದ್ದಾರೆ.ಜಾಮ್ತಾದಲ್ಲಿರುವ ಈ ಅಂಗಳದ ಸೌಲಭ್ಯದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಶೇಷವೆಂದರೆ ನಾಯಕ ಕುಕ್ 2006ರಲ್ಲಿ ಪದಾರ್ಪಣೆ ಮಾಡಿದ್ದು ಇದೇ ನಗರದಲ್ಲಿ. ಸಿವಿಲ್ ಲೈನ್ಸ್‌ನಲ್ಲಿರುವ ಹಳೆಯ ಕ್ರೀಡಾಂಗಣದಲ್ಲಿ ಆ ಪಂದ್ಯ ನಡೆದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry