ಪ್ರದರ್ಶನ ತೃಪ್ತಿ ನೀಡಿದೆ: ಪೂಜಾರ

7

ಪ್ರದರ್ಶನ ತೃಪ್ತಿ ನೀಡಿದೆ: ಪೂಜಾರ

Published:
Updated:

ಮುಂಬೈ (ಪಿಟಿಐ): ಕಳೆದ ಒಂದೂವರೆ ವರ್ಷದಲ್ಲಿ ನಾನು ತೋರಿದ ಪ್ರದರ್ಶನ ತೃಪ್ತಿದಾಯಕವಾಗಿದೆ ಎಂದು ಭಾರತ ಟೆಸ್ಟ್‌ ಕ್ರಿಕೆಟ್‌ ತಂಡದ ಉದಯೋನ್ಮುಖ ಆಟಗಾರ ಚೇತೇಶ್ವರ ಪೂಜಾರ ಹೇಳಿದ್ದಾರೆ.‘ಅಂಗಳದಲ್ಲಿ ಕಠಿಣ ಪರಿಶ್ರಮ ತೋರುತ್ತಿದ್ದೇನೆ. ಮಂಡಿಯ ಶಸ್ತ್ರ ಚಿಕಿತ್ಸೆಯ ನಂತರ ಕಳೆದ ನಾಲ್ಕೈದು ತಿಂಗಳುಗಳಿಂದ ಫಿಟ್‌ನೆಸ್‌ ಕಾಪಾಡಿ ಕೊಳ್ಳುವತ್ತಲೂ ಹೆಚ್ಚಿನ ಗಮನ ಹರಿಸಿದ್ದೇನೆ. ಫಿಟ್‌ನೆಸ್‌ನಿಂದಾಗಿ ಆಟದ ವೇಳೆ ಏಕಾಗ್ರತೆ ಕಾಪಾಡಿಕೊಳ್ಳಲು ಸಾಧ್ಯವಾಗಿದೆ’ ಎಂದು ಅವರು ತಿಳಿಸಿದ್ದಾರೆ.ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಪೂಜಾರ, ಐಸಿಸಿ ಪ್ರಕಟಿಸಿರುವ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ರ್‍ಯಾಂಕಿಂಗ್‌ ಪಟ್ಟಿದಲ್ಲಿ ಇದೇ ಮೊದಲ ಬಾರಿಗೆ ಐದನೇ ಸ್ಥಾನ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry