ಗುರುವಾರ , ಏಪ್ರಿಲ್ 15, 2021
28 °C

ಪ್ರಧಾನಿ ಕನಸು ಕಾಣುತ್ತಿಲ್ಲ: ಅಡ್ವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಧಾನಿ ಕನಸು ಕಾಣುತ್ತಿಲ್ಲ: ಅಡ್ವಾಣಿ

ನವದೆಹಲಿ (ಐಎಎನ್‌ಎಸ್): `ಪಕ್ಷ ಹಾಗೂ ದೇಶ ನನಗೆ ಸಾಕಷ್ಟು ಅವಕಾಶ ನೀಡಿದೆ. ಪ್ರಧಾನಿ ಹುದ್ದೆ ನೀಡಿದ್ದಕ್ಕಿಂತಲೂ ಇದು ಹೆಚ್ಚಿನದು ಎಂದು ಭಾವಿಸಿರುವೆ ಹಾಗಾಗಿ ತಾವು ಪ್ರಧಾನಿ ಹುದ್ದೆ ಅಭ್ಯರ್ಥಿಯ ಆಕಾಂಕ್ಷಿಯಲ್ಲ~



ತಮ್ಮ 85ನೇ ಹುಟ್ಟುಹಬ್ಬದ ಸಂದರ್ಭ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಅಡ್ವಾಣಿ ಈ ರೀತಿ ಸ್ಪಷ್ಟನೆ ನೀಡಿದರು. ಈ ಹಿಂದಿನ 2009ರ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿ ಅವರನ್ನು ಪ್ರಧಾನಿ ಸ್ಥಾನದ ಅಭ್ಯರ್ಥಿಯನ್ನಾಗಿ ಬಿಂಬಿಸಲಾಗಿತ್ತು. ಇದಕ್ಕೆ ಪೂರಕವಾಗಿ ಅಡ್ವಾಣಿ ರಥಯಾತ್ರೆ ಮೂಲಕ ದೇಶ ಸುತ್ತಿದ್ದರು.



ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಅವರೂ ಅಡ್ವಾಣಿ ನಿವಾಸಕ್ಕೆ ತೆರಳಿ ಶುಭ ಹಾರೈಸಿದರು. ಇತ್ತೀಚಿನ ವಿವಾದಗಳ ಹಿನ್ನೆಲೆಯಲ್ಲಿ ಗಡ್ಕರಿ ಭವಿಷ್ಯ ನಿರ್ಧರಿಸಲು ಸೇರಿದ್ದ ಮುಖಂಡರ ಸಭೆಗೆ ಅಡ್ವಾಣಿ ಗೈರು ಹಾಜರಾಗುವ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದನ್ನು ಬಹಿರಂಗಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಗಡ್ಕರಿ ಅಡ್ವಾಣಿ ಈ ಭೇಟಿ ಮಹತ್ವ ಪಡೆದಿತ್ತು.



ಗಡ್ಕರಿ-ಅಡ್ವಾಣಿ ಭೇಟಿ ಸಂದರ್ಭ ವಾತಾವರಣ ಪೂರ್ಣ ತಿಳಿಯಾಗಿತ್ತು. ಅಡ್ವಾಣಿ ಅವರಿಗೆ ಶುಭಾಶಯ ಹೇಳಿದ ಗಡ್ಕರಿ ಅವರ ಪಾದಮುಟ್ಟಿ ಆಶೀರ್ವಾದ ಪಡೆದಿದ್ದು, 15 ನಿಮಿಷಗಳ ಕಾಲ ಉಭಯ ಮುಖಂಡರು ಚರ್ಚೆ ನಡೆಸಿದರು ಎಂದು ದೆಹಲಿ ಬಿಜೆಪಿ ಮುಖಂಡ ವಿಜಯ್ ಜಾಲಿ ತಿಳಿಸಿದರು. ಅಡ್ವಾಣಿ ಹುಟ್ಟುಹಬ್ಬದ ಪ್ರಯುಕ್ತ ಪಕ್ಷದ ಕಾರ‌್ಯಕರ್ತರು ಅವರ ನಿವಾಸದ ಬಳಿ ಭಾರಿ ಸಂಖ್ಯೆಯಲ್ಲಿ ಸೇರಿದ್ದರು.



ಕಾಲಿಗೆರಗಿದ ರಷ್ಯಾ ರಾಯಭಾರಿ: ಭಾರತದಲ್ಲಿನ ರಷ್ಯಾ ರಾಯಭಾರಿ ಅಲೆಗ್ಸಾಂಡರ್ ಎಂ. ಕಡಕಿನ್ ಅವರು ಅಡ್ವಾಣಿ ಅವರನ್ನು ಭೇಟಿ ಮಾಡಿ ಜನ್ಮದಿನದ ಶುಭ ಕೋರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.