ಪ್ರಧಾನಿ ಕ್ಷಮೆ ಕೋರಿದ ಟಾಟಾ

7
ಪತ್ರಿಕಾ ಸಂದರ್ಶನ ವಿವಾದ

ಪ್ರಧಾನಿ ಕ್ಷಮೆ ಕೋರಿದ ಟಾಟಾ

Published:
Updated:
ಪ್ರಧಾನಿ ಕ್ಷಮೆ ಕೋರಿದ ಟಾಟಾ

ನವದೆಹಲಿ (ಪಿಟಿಐ): ಟಾಟಾ ಸಮೂಹದ ಅಧ್ಯಕ್ಷ ರತನ್ ಟಾಟಾ ಪ್ರಧಾನಿ ಮನಮೋಹನ್ ಸಿಂಗ್ ಅವರ ಕ್ಷಮೆ ಯಾಚಿಸಿದ್ದಾರೆ. ವಾಣಿಜ್ಯ ಪತ್ರಿಕೆಯೊಂದರ ಲಂಡನ್ ಆವೃತ್ತಿಗೆ ನೀಡಿದ ಸಂದರ್ಶನದಲ್ಲಿ ತಾವು ಪ್ರಧಾನಿ ಕುರಿತು ನೀಡಿದ ಹೇಳಿಕೆ ತಪ್ಪಾಗಿ ವರದಿ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. `ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಗಳು ಯಾವಾಗಲೂ ಅನಿವಾರ್ಯವಾಗಿ ಕೆಲವೊಂದು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಇದನ್ನು ರಚನಾತ್ಮಕವಾಗಿ ಬಳಸಿಕೊಳ್ಳಬೇಕು. ಸಾರ್ವಜನಿಕವಾಗಿಯೂ, ಖಾಸಗಿಯಾಗಿಯೂ ನಾನು ನಿಮ್ಮ ಬಹು ದೊಡ್ಡ ಅಭಿಮಾನಿ ಮತ್ತು ಬೆಂಬಲಿಗ. ನಿಮ್ಮ ಬಗ್ಗೆ ಆಡಿದ ಮಾತುಗಳು ಪತ್ರಿಕೆಯಲ್ಲಿ ವರದಿಯಾಗಿವೆ.  ಶೀರ್ಷಿಕೆಯೇ ದಾರಿ ತಪ್ಪಿಸುವಂತಿದೆ. ಇದಕ್ಕಾಗಿ ನಿಮ್ಮ ಕ್ಷಮೆ ಕೋರುತ್ತೇನೆ ಎಂದು ಟಾಟಾ ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ. ರತನ್ ಟಾಟಾ ಡಿ. 28ರಂದು ನಿವೃತ್ತರಾಗಲಿದ್ದು, ನಂತರ ಟಾಟಾ ಸನ್ಸ್‌ನ ವಿಶ್ರಾಂತ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ.`ಪ್ರಧಾನಿ ಮತ್ತು ಸರ್ಕಾರದ ವಿರುದ್ಧ ಚಾಟಿ ಬೀಸಿದ ಟಾಟಾ' ಶೀರ್ಷಿಕೆಯಲ್ಲಿ ಡಿ. 8ರಂದು ಸಂದರ್ಶನ ಪ್ರಕಟಗೊಂಡಿತ್ತು. ಡಿ. 10ರಂದೇ ಪ್ರಧಾನಿಗೆ ಟಾಟಾ ಪತ್ರ ಬರೆದಿದ್ದಾರೆ.`ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯ ಇದೆ ಎನ್ನುವ ಹಾಗೆ ಪತ್ರಿಕೆಗಳಲ್ಲಿ ಸಂದರ್ಶನ ಪ್ರಕಟಗೊಂಡಿವೆ. ಕೆಲವು ಪತ್ರಕರ್ತರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ರತನ್ ಟಾಟಾ ಹೆಸರಿನಲ್ಲಿ ಪ್ರಕಟಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು, `ನಾನು ನಿಮ್ಮ ನಂಬಿಕೆಗೆ ಬದ್ಧನಾಗಿದ್ದೇನೆ' ಎಂದು ಸ್ಪಷ್ಟಪಡಿಸಿದ್ದಾರೆ.`ಧನ್ಯವಾದ ಟಾಟಾ'

`ನೀವು ಪತ್ರದ ಮೂಲಕ ವ್ಯಕ್ತಪಡಿಸಿರುವ ಸಹೃದಯ ಪ್ರತಿಕ್ರಿಯೆಗೆ ಧನ್ಯವಾದ. ಸಾರ್ವಜನಿಕ ಸೇವೆಯಲ್ಲಿರುವಾಗ ಇಂತಹ ಟೀಕೆಗಳು ಅನಿವಾರ್ಯ. ಇದನ್ನು ರಚನಾತ್ಮಕವಾಗಿ ಪರಿಗಣಿಸೋಣ' ಎಂದು ಪ್ರಧಾನಿ ಡಿ. 12ರಂದು ಟಾಟಾ ಅವರಿಗೆ ಪತ್ರ ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry