ಬುಧವಾರ, ಮೇ 18, 2022
25 °C

ಪ್ರಧಾನಿ ಪತ್ರ ಅಸ್ಪಷ್ಟ: ಬೃಂದಾ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ನವದೆಹಲಿ (ಪಿಟಿಐ):  ಕಲ್ಲಿದ್ದಲು ನಿಕ್ಷೇಪ ಮಂಜೂರಾತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಆರೋಪಗಳ ಕುರಿತು ಸ್ಪಷ್ಟನೆ ನೀಡಲು ಈ ಸಂಬಂಧ ಆಂದೋಲನ ಕೈಗೊಂಡಿರುವ ಅಣ್ಣಾ ತಂಡಕ್ಕೆ ಪ್ರಧಾನಿ ಸಚಿವಾಲಯದಿಂದ ಕಳುಹಿಸಿದ ಪತ್ರ ಅಸ್ಪಷ್ಟತೆಯಿಂದ ಕೂಡಿದೆ ಎಂದು ಸಿಪಿಎಂ ನಾಯಕಿ ಬೃಂದಾ ಕಾರಟ್ ಟೀಕಿಸಿದ್ದಾರೆ.ಕಲ್ಲಿದ್ದಲು ನಿಕ್ಷೇಪ ಅವ್ಯವಹಾರಗಳ ಕುರಿತು ಅಣ್ಣಾ ತಂಡದ ಸದಸ್ಯರ ವಾದದಲ್ಲಿ ಹುರುಳಿದ್ದು, ಸಾಂವಿಧಾನಿಕ ಸಂಸ್ಥೆ ಎನಿಸಿದ ಮಹಾಲೇಖಪಾಲ ಸಂಸ್ಥೆ (ಸಿಎಜಿ) ವರದಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳ ಮೇಲೆ ಅಣ್ಣಾ ತಂಡ ಬೆಳಕು ಚೆಲ್ಲಿದೆ. ಇಂತಹ ಆರೋಪ ಮಾಡಿದ್ದು ಯಾವುದೇ ವಿರೋಧ ಪಕ್ಷ ಅಲ್ಲ ಎಂಬುದನ್ನೂ ಪ್ರಧಾನಿ ಮನಗಾಣಬೇಕು ಎಂದಿದ್ದಾರೆ.ಈ ಹಿಂದೆ ಪ್ರಧಾನಿ ಕಲ್ಲಿದ್ದಲು ಸಚಿವಾಲಯದ ಉಸ್ತುವಾರಿ ವಹಿಸಿಕೊಂಡಿದ್ದು ಇದೇ ಅವಧಿಯಲ್ಲಿ ಅವ್ಯವಹಾರ ನಡೆದಿದೆ. ಅವ್ಯವಹಾರ ತನಿಖೆಯನ್ನು ಇದೀಗ ಸಿಬಿಐಗೆ ವಹಿಸಲಾಗಿದ್ದರೂ ಇದಕ್ಕೆಲ್ಲ ಉತ್ತರ ಸಿಕ್ಕುತ್ತದೆ ಎನ್ನುವುದು ಮಾತ್ರ ಅನುಮಾನ ಎಂದರು. ಅವ್ಯವಹಾರದ ಕುರಿತು ಪ್ರಧಾನಿ ಹಾಗೂ ಇತರ ಸಚಿವರ ವಿರುದ್ಧ ವಿಚಾರಣೆಗೆ ವಿಶೇಷ ತನಿಖಾ ತಂಡ ರಚಿಸುವ ಅಣ್ಣಾ ಬೇಡಿಕೆಯನ್ನು ಪ್ರಧಾನಿ ಸಚಿವಾಲಯ ಈಗಾಗಲೆ ತಿರಸ್ಕರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.