ಸೋಮವಾರ, ಏಪ್ರಿಲ್ 19, 2021
32 °C

ಪ್ರಧಾನಿ ಬಂಧುಗಳ ಪ್ರವಾಸ ವೆಚ್ಚನೀಡಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರಧಾನಿಯವರ ವಿದೇಶ ಪ್ರವಾಸದಲ್ಲಿ ಅವರೊಂದಿಗೆ ತೆರಳಿದ ಸಂಬಂಧಿಕರ ಪ್ರಯಾಣ ವೆಚ್ಚಗಳ ವಿವರ ಒದಗಿಸುವಂತೆ ಪ್ರಧಾನಿ ಕಚೇರಿ (ಪಿಎಂಒ)ಗೆ ನಿರ್ದೇಶನ ನೀಡಿರುವ ಕೇಂದ್ರ ಮಾಹಿತಿ ಆಯೋಗ (ಸಿಐಸಿ)ವು, ತನ್ನ ಬಳಿ ಅಂತಹ ಯಾವುದೇ ದಾಖಲೆಗಳಿಲ್ಲ ಎಂಬ ಪಿಎಂಒ ವಾದವನ್ನು ತಳ್ಳಿಹಾಕಿದೆ.ಮಾಹಿತಿ ಹಕ್ಕು ಕಾಯ್ದೆಯಡಿ ಈ ವಿವರ ಬಯಸಿದ ಆರ್‌ಟಿಐ ಅರ್ಜಿದಾರರೊಬ್ಬರಿಗೆ ಪಿಎಂಒ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಶಿಷ್ಟಾಚಾರ ವಿಭಾಗಗಳೆರಡೂ ತಮ್ಮಲ್ಲಿ ಯಾವುದೇ ದಾಖಲೆಗಳಿಲ್ಲ ಎಂದು ತಿಳಿಸಿವೆ.ಅರ್ಜಿದಾರರು ಸಿಐಸಿ ಮುಂದೆ ವಿಷಯ ಪ್ರಸ್ತಾಪಿಸಲಾಗಿ ಈಗ ಅದು ಪಿಎಂಒಗೆ ವಿವರ ನೀಡಲು ಸೂಚಿಸಿದೆ.ಅರ್ಜಿದಾರರಿಗೆ ಈ ಆದೇಶ ಪಡೆದ 20 ದಿನಗಳ ಒಳಗಾಗಿ ವಿವರ ನೀಡುವಂತೆ ಕೇಂದ್ರ ಸಾರ್ವಜನಿಕ ಮಾಹಿತಿ ವಿಭಾಗದ ಅಧಿಕಾರಿಗೆ ಸಿಐಸಿ ನಿರ್ದೇಶಿಸಿದೆ. ಪ್ರಧಾನಿ ಬಂಧುಗಳ ವಿದೇಶಿ ಪ್ರವಾಸ ವಿವರ ಮತ್ತು ಅವರ ಪ್ರಯಾಣ ವೆಚ್ಚಗಳಿಗೆ ಯಾವ ಮಾನದಂಡವನ್ನು ಅನುಸರಿಸಲಾಗುತ್ತದೆ ಎಂಬುದನ್ನು ತಿಳಿಯಬಯಸಿ ಉತ್ತರಪ್ರದೇಶ ರಾಜ್ಯದ ಷಹಾಜನ್‌ಪುರದವರಾದ ಆರ್‌ಟಿಐ ಅರ್ಜಿದಾರ ಅಯೂಬ್ ಅಲಿ ಅರ್ಜಿ ಸಲ್ಲಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.