ಶನಿವಾರ, ಮೇ 15, 2021
22 °C

ಪ್ರಧಾನಿ ಭೇಟಿ ಮಾಡಿದ ಡಾ.ವಿ.ಕೆ.ಸಾರಸ್ವತ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): `ಅಗ್ನಿ -5~ ಖಂಡಾಂತರ ಕ್ಷಿಪಣಿಯ ಪ್ರಥಮ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾದ ಹಿನ್ನೆಲೆಯಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಓ) ಮುಖ್ಯಸ್ಥ ಡಾ.ವಿ.ಕೆ.ಸಾರಸ್ವತ್ ಅವರು ಶನಿವಾರ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಮಾಡಿ ಯೋಜನೆಯ ಮುಂದಿನ ಬೆಳವಣಿಗೆಗಳ ಕುರಿತು ಚರ್ಚಿಸಿದರು.ಪ್ರಧಾನಮಂತ್ರಿಗಳ ನಿವಾಸದಲ್ಲಿ ಸುಮಾರು 30 ನಿಮೀಷಗಳ ಕಾಲ ನಡೆದ ಸಭೆಯಲ್ಲಿ ಸಾರಸ್ವತ್ ಅವರೊಂದಿಗೆ ಅಗ್ನಿ ಯೋಜನೆಯ ನಿರ್ದೇಶಕರ ಅವಿನಾಶ್ ಚಂದ್ರ ಭಾಗವಹಿಸಿದ್ದರು.ಪರಮಾಣು ಸಿಡಿತಲೆಗಳನ್ನು ಹೊತ್ತು ಸುಮಾರು 5,000 ಕಿ.ಮೀ ಕ್ರಮಿಸಬಲ್ಲ ಸ್ವದೇಶಿ ನಿರ್ಮಿತ `ಅಗ್ನಿ -5~ ಕ್ಷಿಪಣಿ~ಯ ಮೊದಲ ಪ್ರಯೋಗಾರ್ಥ ಪರೀಕ್ಷೆಯು ಒಡಿಶಾದ ಕರಾವಳಿ ತೀರದಲ್ಲಿ ಗುರುವಾರ ಯಶಸ್ವಿಯಾಗುವ ಮೂಲಕ ಭಾರತವು ಪ್ರತಿಷ್ಠಿತ ಕ್ಷಿಪಣಿ ರಾಷ್ಟ್ರಗಳ ಸಾಲಿಗೆ ಸೇರಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.