ಪ್ರಧಾನಿ ಭೇಟಿ ಮಾಡಿದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ವಹೀದ್‌

7

ಪ್ರಧಾನಿ ಭೇಟಿ ಮಾಡಿದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ವಹೀದ್‌

Published:
Updated:
ಪ್ರಧಾನಿ ಭೇಟಿ ಮಾಡಿದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ವಹೀದ್‌

ನವದೆಹಲಿ (ಐಎಎನ್‌ಎಸ್): ಐದು ದಿನಗಳ ಅಧಿಕೃತ ಭಾರತ ಪ್ರವಾಸಕ್ಕಾಗಿ ಶನಿವಾರ ಇಲ್ಲಿಗೆ ಆಗಮಿಸಿದ ಮಾಲ್ಡೀವ್ಸ್ ನೂತನ ಅಧ್ಯಕ್ಷ ಮೊಹಮದ್ ವಹೀದ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.ಮಾತುಕತೆಯ ವೇಳೆ ಉಭಯ ನಾಯಕರು ಕಳೆದ ಫೆಬ್ರುವರಿಯಲ್ಲಿ ನಡೆದ ಮೊಹಮದ್ ನಶಿದ್ ಅವರ ವಿವಾದಾತ್ಮಕ ಪದಚ್ಯುತಿಯ ಹಿನ್ನೆಲೆಯಲ್ಲಿ ಮಾಲ್ಡೀವ್ಸ್‌ನಲ್ಲಿ ಉಂಟಾಗಿರುವ ಅಶಾಂತಿ ಹಾಗೂ ಮುಂಬರುವ ಚುನಾವಣೆಗಳ ಕುರಿತು ಚರ್ಚಿಸಿದರು.ಪ್ರಧಾನಿ ಮನಮೋಹನ್ ಸಿಂಗ್ ಅವರ ಆಹ್ವಾನದ ಮೇರೆಗೆ ಐದು ದಿನಗಳ ಭಾರತ ಪ್ರವಾಸಕ್ಕೆ ಆಗಮಿಸಿರುವ ವಹೀದ್ ತಮ್ಮದೊಂದಿಗೆ ಪತ್ನಿ ಲಹಾಮ್ ಹುಸೆನ್ ಹಾಗೂ ನಿಯೋಗವೊಂದನ್ನು ಕರೆತಂದಿದ್ದಾರೆ.

 

ಪ್ರಧಾನಿ ಭೇಟಿಗೂ ಮುಂಚೆ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಿದ ವಹೀದ್ ಅವರು ಒಂದು ಗಂಟೆಗೂ ಅಧಿಕ ಸಮಯ ಮಾತುಕತೆ ನಡೆಸಿದರು. ವಹೀದ್ ಅವರು ಸಂಜೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿಯಾಗಲಿದ್ದಾರೆ.ಮೂರು ವಾರಗಳ ಹಿಂದಷ್ಟೇ ನವದೆಹಲಿಗೆ ಭೇಟಿ ನೀಡಿದ್ದ ಮಾಲ್ಡೀವ್ಸ್‌ನ ಪದಚ್ಯುತ ಮಾಜಿ ಅಧ್ಯಕ್ಷ ನಾಶಿದ್ ಅವರು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿಮಾಡಿಕೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry