ಸೋಮವಾರ, ಜೂನ್ 21, 2021
23 °C

ಪ್ರಧಾನಿ ಸಭೆಯಲ್ಲಿ ಕೋಮು ಪ್ರಚೋದಕ ಸಾಹಿತ್ಯ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ (ಐಎಎನ್‌ಎಸ್): ಎರಡು ದಿನಗಳ ಹಿಂದೆ ಪ್ರಧಾನಿ ಮನಮೋಹನ್ ಸಿಂಗ್ ಭಾಗವಹಿಸಿದ್ದ ಸಭೆಯಲ್ಲಿ ಕೋಮು ಪ್ರಚೋದಕ ಸಾಹಿತ್ಯ ಹಂಚಲಾಗಿತ್ತು ಎಂಬ ಆರೋಪದ ಕುರಿತಾದ ವಿವಾದ ಇನ್ನೂ ತಣ್ಣಗಾಗಿಲ್ಲ. ಸ್ಯಾಂಕೆಲಿಮ್ ನಡೆದ ಸಭೆಯಲ್ಲಿ ಈ ರೀತಿಯ ಸಾಹಿತ್ಯ ವಿತರಿಸಲಾಗಿತ್ತೇ ಎಂಬ ಕುರಿತು ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿದ್ದಾಗಿ ಚುನಾವಣಾ ಆಯೋಗ ಹೇಳಿದೆ.ಸ್ಥಳೀಯ ವಾರ ಪತ್ರಿಕೆಯೊಂದರಲ್ಲಿ ರಾಜಕೀಯ ಪಕ್ಷವೊಂದರ ವಿರುದ್ಧ ಪ್ರಕಟಿಸಲಾದ ಲೇಖನದ ಸಾವಿರಾರು ಪ್ರತಿಗಳನ್ನು ಅಲ್ಲಿ ಹಂಚಲಾಗಿತ್ತು ಎನ್ನಲಾಗಿದೆ.ಏತನ್ಮಧ್ಯೆ, ಪ್ರಧಾನಿ ಸಿಂಗ್ ಮಾತನಾಡುತ್ತಿರುವಾಗ ಮಧ್ಯದಲ್ಲೇ ಮೈಕ್ ಕೈಕೊಟ್ಟ ಕುರಿತು ಕಾಂಗ್ರೆಸ್ ಪಕ್ಷ ತನ್ನದೇ ಆದ ತನಿಖೆ ಆರಂಭಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.