ಶನಿವಾರ, ಜೂನ್ 19, 2021
21 °C

ಪ್ರಧಾನಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹತ್ತಿ ರಫ್ತು ನಿಷೇಧಕ್ಕೆ ಸಂಬಂಧಿಸಿದಂತೆ ತೀವ್ರ ಆಕ್ಷೇಪ ಕೇಳಿಬಂದಿರುವ ಹಿನ್ನೆಲೆಯಲ್ಲಿ, ಸಚಿವರ ಸಮಿತಿ (ಜಿಒಎಂ) ಇದನ್ನು ತುರ್ತಾಗಿ ಪರಾಮರ್ಶೆ ನಡೆಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ಸೂಚಿಸಿದ್ದಾರೆ.ರಫ್ತು ನಿಷೇಧ ಕುರಿತು ಸಚಿವರ ಸಮಿತಿ ಮಾರ್ಚ್ 9ರಂದು (ಶುಕ್ರವಾರ) ಸಭೆ ಸೇರಿ,  ಪರಾಮರ್ಶೆ ನಡೆಸಿ, ನಿರ್ಧಾರ ಪ್ರಕಟಿಸುವಂತೆ ಪ್ರಧಾನಿ ಸೂಚಿಸಿದ್ದಾರೆ.ಗುಜರಾತ್ ಕಾಂಗ್ರೆಸ್‌ನ ಮುಖಂಡ ಮೋಹನ್ ಪ್ರಕಾಶ್ ಅವರ ನಿಯೋಗ ಬುಧವಾರ ಇಲ್ಲಿ ಪ್ರಧಾನಿ ಅವರನ್ನು ಭೇಟಿ ಮಾಡಿ ಚರ್ಚಿಸಿದ ಬೆನ್ನಲ್ಲೇ, ಈ ಸೂಚನೆ ಹೊರಬಿದ್ದಿದೆ. ಈ ನಿಯೋಗವು ಹತ್ತಿ ರಫ್ತಿನ ಮೇಲಿನ ನಿಷೇಧ  ಕೂಡಲೇ ತೆಗೆದುಹಾಕಬೇಕು ಎಂದು ಆಗ್ರಹಿಸಿತ್ತು. ಹತ್ತಿ ರಫ್ತು ನಿಷೇಧಕ್ಕೆ ಸಂಬಂಧಿಸಿದಂತೆ ವಾಣಿಜ್ಯ ಸಚಿವಾಲಯದ ನಿರ್ಧಾರಕ್ಕೆ ಕೃಷಿ ಸಚಿವ ಶರದ್ ಪವಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.