ಪ್ರಧಾನಿ ಹುದ್ದೆಗೆ ಮೋದಿ : ಯಡಿಯೂರಪ್ಪ ಪ್ರಬಲ ಪ್ರತಿಪಾದನೆ

7

ಪ್ರಧಾನಿ ಹುದ್ದೆಗೆ ಮೋದಿ : ಯಡಿಯೂರಪ್ಪ ಪ್ರಬಲ ಪ್ರತಿಪಾದನೆ

Published:
Updated:

ಮುಂಬೈ (ಐಎಎನ್‌ಎಸ್): ಮುಂಬೈನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿರುವ ಮಾಜಿಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಸೂಕ್ತ ಎಂದು ಹೇಳುವ ಮೂಲಕ ಮೋದಿ ಪ್ರಧಾನಿಯಾಗುವುದಕ್ಕೆ ವೇದಿಕೆ ಸಿದ್ದವಾಗತೊಡಗಿದೆ.

ನರೇಂದ್ರಮೋದಿ ಅವರು ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ ನಂತರ ಇಲ್ಲಿಗೆ ಬಂದ ಯಡಿಯೂರಪ್ಪ ಅವರು ಇಡಿ ದೇಶ ನರೇಂದ್ರ ಮೋದಿ ಅವರು ಪ್ರಧಾನಿಯಾಗುವುದನ್ನು ನೋಡಲು ಕಾತರದಿಂದಿದೆ. ಆದ್ದರಿಂದ 2014ರ ಮಹಾ ಚುನಾವಣೆಯಲ್ಲಿ ಮೋದಿ ಅವರನ್ನು ಬಿಜೆಪಿಯಿಂದ ಪ್ರಧಾನಿ ಹುದ್ದೆಗೆ ಅಭ್ಯರ್ಥಿಯಾಗಿ ಬಿಂಬಿಸಬೇಕು ಎಂದು ಪ್ರತಿಪಾದಿಸಿದರು. ತಮ್ಮ ಹಾಗೂ ಪಕ್ಷದ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯಕ್ಕೆ ಅನಂತಕುಮಾರ ಅವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಮತ್ತೊಮ್ಮೆ ನೇರ ಆರೋಪ ಮಾಡಿದರು.ಶುಕ್ರವಾರ ಸಂಜೆ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಇಬ್ಬರೂ ಪಕ್ಷದ ಬೃಹತ್ ಪ್ರದರ್ಶನದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry