ಬುಧವಾರ, ನವೆಂಬರ್ 13, 2019
23 °C

ಪ್ರಧಾನಿ ಹುದ್ದೆಯನ್ನು ಮತ್ತೆ ತಿರಸ್ಕರಿಸಿದ ರಾಹುಲ್

Published:
Updated:

ನವದೆಹಲಿ (ಪಿಟಿಐ): ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಾನು ಪ್ರಧಾನಿ ಅಭ್ಯರ್ಥಿ ಅಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು ಗುರುವಾರ ಸ್ಪಷ್ಟಪಡಿಸಿದ್ದಾರೆ.ಇಲ್ಲಿ ನಡೆಯುತ್ತಿದ್ದ ಭಾರತೀಯ ಕೈಗಾರಿಕೆಗಳ ಮಹಾಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಪ್ರಧಾನಮಂತ್ರಿ ಆಗುತ್ತೀರಾ ಎಂಬುದೇ ತೀರಾ ಅಸಂಬದ್ದ ಪ್ರಶ್ನೆ ಎಂದು ಹೇಳಿದರು.ಕೆಲವು ಪತ್ರಕರ್ತರು ತಮ್ಮನ್ನು ನೀವಿನ್ನು ಯಾಕೆ ಮದುವೆಯಾಗಿಲ್ಲ, ಎಲ್ಲಾ ಸಾಧ್ಯತೆಗಳು ಇದ್ದಾಗ್ಯೂ ಯಾಕೆ ನೀವು ಪ್ರಧಾನಿಯಾಗಬಾರದು ಎಂದೆಲ್ಲಾ ಪ್ರಶ್ನೆಗಳನ್ನು ಕೇಳುತ್ತಾರೆ. ಆದರೆ ಇವೆಲ್ಲಾ ಅಸಂಬದ್ದ ಪ್ರಶ್ನೆಗಳು ಎಂದು ಸ್ಪಷ್ಟವಾಗಿ ಹೇಳಿದ ರಾಹಲ್ ಸದ್ಯ ನಮ್ಮ ಜನಕ್ಕೆ ನಾವು ದನಿಯನ್ನು ಹೇಗೆ ಕೊಡುತ್ತೀವಿ ಎಂಬುದೇ ನಮ್ಮೆದುರಿನ ಪ್ರಶ್ನೆಯಾಗಿದೆ ಎಂದು ಅವರು ಹೇಳಿದರು.ಇತ್ತೀಚೆಗಷ್ಟೆ ರಾಹುಲ್ ಗಾಂಧಿ ಅವರು ಪ್ರಧಾನಿಯಾಗುತ್ತೀರಾ ಎಂಬುದೇ ಒಂದು ತಪ್ಪು ಪ್ರಶ್ನೆ ಎಂದು ಹೇಳಿದ್ದರು.

ಪ್ರತಿಕ್ರಿಯಿಸಿ (+)