ಗುರುವಾರ , ಮೇ 13, 2021
40 °C
ರಾಜ್ಯ ರ‌್ಯಾಕಿಂಗ್ ಬ್ಯಾಡ್ಮಿಂಟನ್ ಟೂರ್ನಿ

ಪ್ರಧಾನ ಸುತ್ತಿಗೆ ನಿಖಿಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಸ್ಥಳೀಯ ಆಟಗಾರ ನಿಖಿಲ್ ವಿ.ದೇಸಾಯಿ ಸೇರಿದಂತೆ 23 ಸ್ಪರ್ಧಿಗಳು ಬುಧವಾರ ಆರಂಭವಾದ `ಲಿ-ನಿಂಗ್ 5 ಸ್ಟಾರ್ ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿ'ಯ ಪ್ರಧಾನ ಸುತ್ತು ಪ್ರವೇಶಿಸಿದರು.ದಾವಣಗೆರೆ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆ ಹಾಗೂ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ ಜಂಟಿ ಆಶ್ರಯದಲ್ಲಿ ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 15 ವರ್ಷದೊಳಗಿನವರ ಬಾಲಕರ ವಿಭಾಗದ ಅರ್ಹತಾ ಸುತ್ತಿನ ಪಂದ್ಯದಲ್ಲಿ ನಿಖಿಲ್ 21-17ರಿಂದ ನಿಹಾಲ್ ನಾಯ್ಕ ವಿರುದ್ಧ ಗೆಲುವು ಸಾಧಿಸಿದನು.ಇತರ ಪಂದ್ಯಗಳ ಫಲಿತಾಂಶ

15 ವರ್ಷದೊಳಗಿನವರ ವಿಭಾಗ:
ಕೆ.ಅಭಿರಾಮ್ 22-20ರಿಂದ ಸಮೀರ್ ಸುಬೇದಾರ್ ವಿರುದ್ಧ, ಸಮನ್‌ದೀಪ್ ಮಂಡಲ್ 21-19ರಿಂದ ಪೃಥ್ವಿ ಕೆ.ರಾಯ್ ವಿರುದ್ಧ, ಅನಿರುದ್ಧ ರಾವ್ 21-14ರಿಂದ ಅನಿರುದ್ಧ ರಾಜೀವ್ ವಿರುದ್ಧ, ಕೆ.ಶಮಂತ್ 21-16ರಿಂದ ಎನ್.ಶ್ರೀಹರಿ ಗುಪ್ತ ವಿರುದ್ಧ, ಎಂ.ಆರ್.ವಿಖ್ಯಾತ್ 21-10ರಿಂದ ಸುಯೋಗ್ ಶೆಟ್ಟಿ ವಿರುದ್ಧ; ಶೀಕರ್ ರಾಜೇಶ್ 21-10ರಿಂದ ನರೇನ್ ಶಂಕರ್ ವಿರುದ್ಧ, ಎಸ್.ಆಕಾಶ್ 21-12ರಿಂದ ಮಂಗಲ್ ಮಹೇಶ್ ವಿರುದ್ಧ ಗೆಲುವು ಸಾಧಿಸಿದರು.17 ವರ್ಷದೊಳಗಿನವರ ವಿಭಾಗ: ಸಿದ್ದಾರ್ಥ್ ಶಿರೋಡ್ಕರ್ 21-12ರಿಂದ ಎ.ಅಭಿ ವಿರುದ್ಧ; ಬಿ.ಎಂ.ರಾಹುಲ್ ಭಾರದ್ವಾಜ್ 21-10ರಿಂದ ಸುಯೋಗ್ ಶೆಟ್ಟಿ ವಿರುದ್ಧ; ಅನಿಶ್ ಉಪಾಧ್ಯಾಯ 21-10ರಿಂದ ಎಸ್.ನಿಶ್ಚಲ್ ವಿರುದ್ಧ; ಎಂ.ಎಲ್.ಕೆವಿನ್ 22-20ಯಿಂದ ಕೆ.ಶಕೀಲ್ ವಿರುದ್ಧ; ಎಸ್.ಅಕ್ಷಯ್ ಶ್ರೀನಿವಾಸ್ 21-14ರಿಂದ ಡಿ.ಸಾಗರ್ ವಿರುದ್ಧ; ಎ.ಆಕಾಶ್ 21-05ರಿಂದ ಎಂ.ಎಸ್.ಾಮ್ರಾಟ್ ವಿರುದ್ಧ; ಯಶ್ ಅಮೃತ್ ಲಾಡ್ 21-19ರಿಂದ ವಿವಿಯನ್ ಲೂಯಿಸ್ ಸಿಕ್ವೇರಾ ವಿರುದ್ಧ ಜಯ ಗಳಿಸಿದರು.19 ವರ್ಷದೊಳಗಿನವರ ವಿಭಾಗ: ರಜತ್ ರಾಮಗೊಂಡ 21-12ರಿಂದ ಎಸ್.ನಿಶ್ಚಲ್ ವಿರುದ್ಧ, ಬಿ.ಅಭಿಲಾಷ್ 21-17ರಿಂದ ಅಮಿತ್ ವಿರುದ್ಧ, ವೈಭವ್ 21-15ರಿಂದ ಕ್ಲಿಫರ್ಡ್ ವಿರುದ್ಧ, ಗೋವರ್ಧನ್ ಶೆಣೈ 21-17ರಿಂದ ಎಸ್.ಸಾಗರ್ ವಿರುದ್ಧ, ಸೈಯದ್ ಸಾದ್ ಅಲಿ 21-16ರಿಂದ ಎಸ್.ಸೂರಜ್ ವಿರುದ್ಧ, ಸುದೀಪ್ ಸುರೇಶ್ 21-18ರಿಂದ ಎಂ.ರಘು ವಿರುದ್ಧ, ಡಿ.ಸಾಗರ್ 21-19ರಿಂದ ಎ.ಅಭಿ ವಿರುದ್ಧ ಜಯ ಗಳಿಸಿದರು. ರಾಹುಲ್ ಬಿ.ಪ್ರಸಾದ್ ವಾಕ್‌ಓವರ್ ಪಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.