ಶುಕ್ರವಾರ, ಜೂನ್ 18, 2021
28 °C
13.5 ಓವರ್‌ಗಳಲ್ಲಿ 193 ರನ್‌!; ಐರ್ಲೆಂಡ್‌ಗೆ ನಿರಾಸೆ

ಪ್ರಧಾನ ಹಂತಕ್ಕೆ ಹಾಲೆಂಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಲ್ಹೆಟ್‌, ಬಾಂಗ್ಲಾದೇಶ (ಪಿಟಿಐ): ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಹಾಲೆಂಡ್‌ ತಂಡದವರು ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯ ‘ಸೂಪರ್‌ 10’ರ ಹಂತ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸಿಲ್ಹೆಟ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಅರ್ಹತಾ ಹಂತದ ಕೊನೆಯ ಪಂದ್ಯದಲ್ಲಿ ಹಾಲೆಂಡ್‌ ಆರು ವಿಕೆಟ್‌ಗಳಿಂದ ಐರ್ಲೆಂಡ್‌ ತಂಡವನ್ನು ಮಣಿಸಿತು. ಈ ಮೂಲಕ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು.‘ಬಿ’ ಗುಂಪಿನಲ್ಲಿ ಹಾಲೆಂಡ್‌ ಅಲ್ಲದೆ, ಜಿಂಬಾಬ್ವೆ ಮತ್ತು ಐರ್ಲೆಂಡ್‌ ಕೂಡಾ ತಲಾ ನಾಲ್ಕು ಪಾಯಿಂಟ್‌ ಗಳಿಸಿದವು. ಆದರೆ ಉತ್ತಮ ರನ್‌ರೇಟ್‌ ಮೂಲಕ ಹಾಲೆಂಡ್‌ (+1.109) ಮುಂದಿನ ಹಂತ ಪ್ರವೇಶಿಸಿತು. ಜಿಂಬಾಬ್ವೆ (+0.957) ಮತ್ತು ಐರ್ಲೆಂಡ್‌ (-0.701) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದವು. ಆಡಿದ ಮೂರೂ ಪಂದ್ಯಗಳಲ್ಲಿ ಸೋಲು ಅನುಭವಿಸಿದ ಯುಎಇ ಕೊನೆಯ ಸ್ಥಾನ ಪಡೆಯಿತು.ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಐರ್ಲೆಂಡ್‌ 20 ಓವರ್‌ ಗಳಲ್ಲಿ 4 ವಿಕೆಟ್‌ಗೆ 189 ರನ್‌ ಪೇರಿಸಿತು. ಆ್ಯಂಡ್ರೀವ್‌ ಪಾಯಿಂಟರ್‌ (57, 38 ಎಸೆತ, 4 ಬೌಂ, 4 ಸಿಕ್ಸರ್‌) ಮತ್ತು ಪೋರ್ಟರ್‌ಫೀಲ್ಡ್‌ (47, 32 ಎಸೆತ, 5 ಬೌಂ, 2 ಸಿಕ್ಸರ್‌) ಮಿಂಚಿನ ಆಟ ತೋರಿದರು.ಹಾಲೆಂಡ್‌ ತಂಡ ಉತ್ತಮ ರನ್‌ರೇಟ್‌ ಮೂಲಕ ಮುಂದಿನ ಹಂತ ಪ್ರವೇಶಿಸಲು 14.2 ಓವರ್‌ಗಳಲ್ಲಿ ಈ ಗುರಿಯನ್ನು ತಲುಪಬೇಕಿತ್ತು. ಸ್ಫೋಟಕ ಬ್ಯಾಟಿಂಗ್‌ ತೋರಿದ ಪೀಟರ್‌ ಬಾರೆನ್‌ ಬಳಗ ಕೇವಲ 13.5 ಓವರ್‌ಗಳಲ್ಲಿ 4 ವಿಕೆಟ್‌ಗೆ 193 ರನ್‌ ಗಳಿಸಿ ಸ್ಮರಣೀಯ ಗೆಲುವು ತನ್ನದಾಗಿಸಿಕೊಂಡಿತು.ಬಾರೆನ್‌ (31, 15 ಎಸೆತ, 4 ಬೌಂ, 2 ಸಿಕ್ಸರ್‌) ಮತ್ತು ಸ್ಟೀಫನ್‌ ಮೈಬರ್ಗ್‌ 63 (23 ಎಸೆತ, 4 ಬೌಂ, 7 ಸಿಕ್ಸರ್‌) ಮೊದಲ ವಿಕೆಟ್‌ಗೆ ಆರು ಓವರ್‌ಗಳಲ್ಲಿ 91 ರನ್‌ ಸೇರಿಸಿದರು.ಆ ಬಳಿಕ ವೆಸ್ಲಿ ಬಾರೆಸಿ (ಅಜೇಯ 40, 22 ಎಸೆತ, 3 ಬೌಂ, 3 ಸಿಕ್ಸರ್) ಹಾಗೂ ಟಾಮ್‌ ಕೂಪರ್‌ (45, 15 ಎಸೆತ, 1 ಬೌಂ, 6 ಸಿಕ್ಸರ್‌) ಸ್ಫೋಟಕ ಬ್ಯಾಟಿಂಗ್‌ ತೋರಿ ತಂಡಕ್ಕೆ ಭರ್ಜರಿ ಜಯ ತಂದುಕೊಟ್ಟರು.ಸಂಕ್ಷಿಪ್ತ ಸ್ಕೋರ್‌: ಐರ್ಲೆಂಡ್‌: 20 ಓವರ್‌ಗಳಲ್ಲಿ 4 ವಿಕೆಟ್‌ಗೆ 189 (ವಿಲಿಯಂ ಪೋರ್ಟರ್‌ಫೀಲ್ಡ್‌ 47, ಎಡ್‌ ಜಾಯ್ಸ್‌ 28, ಆ್ಯಂಡ್ರೀವ್‌ ಪಾಯಿಂಟರ್‌ 57, ಕೆವಿನ್‌ ಒಬ್ರಿಯನ್‌ ಔಟಾಗದೆ 42, ಅಹ್ಸನ್‌ ಮಲಿಕ್‌ ಜಮೀಲ್‌ 26ಕ್ಕೆ 2)ಹಾಲೆಂಡ್‌: 13.5 ಓವರ್‌ಗಳಲ್ಲಿ 4 ವಿಕೆಟ್‌ಗೆ 193 (ಪೀಟರ್‌ ಬಾರೆನ್‌ 31,  ಸ್ಟೀಫನ್‌ ಮೈಬರ್ಗ್‌ 63, ವೆಸ್ಲಿ ಬಾರೆಸಿ 40, ಟಾಮ್‌ ಕೂಪರ್‌ 45, ಕೆವಿನ್‌ ಒಬ್ರಿಯನ್‌ 29ಕ್ಕೆ 2, ಜಾರ್ಜ್‌ ಡಾಕ್ರೆಲ್‌ 43ಕ್ಕೆ 1)ಫಲಿತಾಂಶ: ಹಾಲೆಂಡ್‌ಗೆ 6 ವಿಕೆಟ್‌ ಗೆಲುವು ಹಾಗೂ ಎರಡು ಪಾಯಿಂಟ್‌

ಪಂದ್ಯಶ್ರೇಷ್ಠ: ಸ್ಟೀಫನ್‌ ಮೈಬರ್ಗ್‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.