ಮಂಗಳವಾರ, ನವೆಂಬರ್ 12, 2019
20 °C

ಪ್ರನಾಳ ಶಿಶು ವಿಜ್ಞಾನಿ ಎಡ್ವರ್ಡ್ಸ್ ನಿಧನ

Published:
Updated:
ಪ್ರನಾಳ ಶಿಶು ವಿಜ್ಞಾನಿ ಎಡ್ವರ್ಡ್ಸ್ ನಿಧನ

ಲಂಡನ್ (ಪಿಟಿಐ): ಪ್ರನಾಳ ಶಿಶು ತಂತ್ರಜ್ಞಾನ ಅಭಿವೃದ್ಧಿಯ ಮೂಲಪುರುಷ, ನೊಬೆಲ್ ಪುರಸ್ಕೃತ ಬ್ರಿಟನ್ ವಿಜ್ಞಾನಿ ರಾಬರ್ಟ್ ಎಡ್ವರ್ಡ್ಸ್ (87) ಬುಧವಾರ ನಿಧನರಾದರು.`ಎಡ್ವರ್ಡ್ಸ್ ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು' ಎಂದು ಕೇಂಬ್ರಿಜ್ ವಿಶ್ವವಿದ್ಯಾಲಯ ಹೇಳಿಕೆಯಲ್ಲಿ ತಿಳಿಸಿದೆ.1978ರಲ್ಲಿ ಜಗತ್ತಿನ ಮೊದಲ ಪ್ರನಾಳ ಶಿಶು ಜನಿಸಿದ ಮೂರು ದಶಕಗಳ ನಂತರ, ಅಂದರೆ 2010ರಲ್ಲಿ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತ್ತು.

ಪ್ರತಿಕ್ರಿಯಿಸಿ (+)