`ಪ್ರಪಂಚ ಕಿರಿದಾಗಿಸಿದ ಇಂಟರ್ನೆಟ್'

7

`ಪ್ರಪಂಚ ಕಿರಿದಾಗಿಸಿದ ಇಂಟರ್ನೆಟ್'

Published:
Updated:

ಕನಕಗಿರಿ: ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಂಪ್ಯೂಟರ್ ಹಾಗೂ ಅಂತರ್ಜಾಲದ ಸಮಗ್ರ ಮಾಹಿತಿ ಪಡೆದುಕೊಳ್ಳುವುದು ಅವಶ್ಯಕವಿದೆ ಎಂದು ರಾಜ್ಯ ಕೈಗಾರಿಕಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಶೇಖರಗೌಡ ಪಾಟೀಲ ತಿಳಿಸಿದರು.ಇಲ್ಲಿನ ಶ್ರೀ ಗುರು ರುದ್ರಸ್ವಾಮಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಸೋಮವಾರ ನಡೆದ `ವಿದ್ಯಾರ್ಥಿಗಳ ಅಂತರ್ಜಾಲ ಪ್ರಪಂಚ'ದ ಮೂರು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಂತರ್ಜಾಲದಿಂದ ಇಂದು ಪ್ರಪಂಚ ಕಿರಿದಾಗಿದೆ, ಸ್ಥಳದಲ್ಲಿಯೆ ವಿವಿಧ ರಂಗದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪಡೆಯಬಹುದು ಎಂದು ತಿಳಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಮಹಾಬಳೇಶ್ವರಸ್ವಾಮಿ ಕಲುಬಾಗಿಲಮಠ ಮಾತನಾಡಿ ಸರ್ಕಾರದ ಇಂಥ ಯೋಜನೆಗಳನ್ನು ವಿದ್ಯಾರ್ಥಿಗಳು ಪಡೆದುಕೊಂಡು ಸ್ವಾವಲಂಬಿಯಾಗಿ ಬದುಕಬೇಕೆಂದು ತಿಳಿಸಿದರು.ಸಂಸ್ಥೆಯ ಕಾರ್ಯದರ್ಶಿ ಮಹಾಬಳೇಶ್ವರ ಸಜ್ಜನ್, ಸದಸ್ಯ ಗುರುಸಿದ್ದಪ್ಪ ಹಾದಿಮನಿ, ಪ್ರಶಾಂತ ಪ್ರಭುಶೆಟ್ಟರ್, ಮುಖ್ಯಗುರುಗಳಾದ ಮೌನೇಶ ವೈ ಬಿ, ಗಂಗಾಧರ ಗದ್ದಿ ಹಾಜರಿದ್ದರು.ಅಪರ್ಣ ಸಂಗಡಿಗರು ಪ್ರಾರ್ಥಿಸಿದರು. ಬಸವರಾಜ ಸ್ವಾಗತಿಸಿದರು. ಕರೇಗೌಡ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry