ಬುಧವಾರ, ಜೂನ್ 16, 2021
22 °C

ಪ್ರಪಂಚ ಕೆಲ ಪ್ರಶ್ನೆಗಳು

ಎನ್. ವಾಸುದೇವ್ Updated:

ಅಕ್ಷರ ಗಾತ್ರ : | |

ಪ್ರಪಂಚ ಕೆಲ ಪ್ರಶ್ನೆಗಳು

1. ನಮ್ಮ ಪ್ರಪಂಚದ ಉಪಗ್ರಹ ಚಿತ್ರವೊಂದು ಇಲ್ಲಿದೆ (ಚಿತ್ರ-1). ಇಡೀ ಒಂದು ಭೂಖಂಡ ಈ ಚಿತ್ರದಲ್ಲಿ ಗೋಚರಿಸುತ್ತಿದೆ-ಹೌದಲ್ಲ?

ಅ. ಈ ಭೂಖಂಡ ಯಾವುದು?

ಬ. ಈ ಖಂಡದ ಅತ್ಯಂತ ಸನಿಹದ ದ್ವೀಪದ ಹೆಸರೇನು?

ಕ. ಈ ಖಂಡದಲ್ಲಿರುವ ಯಾವ ರಾಷ್ಟ್ರ ಚಿನ್ನ ಮತ್ತು ವಜ್ರ ನಿಕ್ಷೇಪಗಳಿಗೆ ಪ್ರಸಿದ್ಧ?

2. ಪಥ್ವಿಯ ಒಂದು ಭೂಖಂಡ `ದಕ್ಷಿಣ ಅಮೆರಿಕ~ ಚಿತ್ರ-2 ರಲ್ಲಿದೆ. ಈ ಭೂಖಂಡದಲ್ಲಿರುವ-

ಅ. ಅತ್ಯಂತ ಪ್ರಸಿದ್ಧ ನದಿ

ಬ. ಅತ್ಯಂತ ವಿಖ್ಯಾತ ವಷ್ಟಿವನ

ಕ. ಅತ್ಯಂತ ದೀರ್ಘ ಪರ್ವತ ಪಂಕ್ತಿ

-ಇವುಗಳನ್ನು ಹೆಸರಿಸಬಲ್ಲಿರಾ?

3. ಶುದ್ಧ ತಾಮ್ರದ ನೈಸರ್ಗಿಕ ಗಟ್ಟಿಯೊಂದು ಚಿತ್ರ-3 ರಲ್ಲಿದೆ. ಕೆಳಗಿನ ಪಟ್ಟಿಯಲ್ಲಿರುವ ಯಾವ ರಾಷ್ಟ್ರ ಅತ್ಯಧಿಕ ತಾಮ್ರ ನಿಕ್ಷೇಪಗಳನ್ನು ಹೊಂದಿದೆ?

ಅ. ಕೆನಡ ಬ. ಚಿಲಿ

ಕ. ಚೀನಾ ಡ. ಇಟಲಿ

4. ಕಡಬಿಂದ ಮೇಲೆದ್ದಿರುವ `ಹವಳದ ದ್ವೀಪ~ವೊಂದರ ಸುಂದರ ದೃಶ್ಯ ಚಿತ್ರ-4 ರಲ್ಲಿದೆ. ಪ್ರಪಂಚದ ಅತ್ಯಂತ ದೀರ್ಘ ಹವಳದ ದಿಬ್ಬ `ದಿ ಗ್ರೇಟ್ ಬ್ಯಾರಿಯರರ್ ರೀಫ್~ ಯಾವ ದೇಶದ ಕಡಲಿನಾವಾರದಲ್ಲಿದೆ?

ಅ. ಯು.ಎಸ್.ಎ. ಬ. ರಷಿಯ

ಕ. ಜಪಾನ್ ಡ. ಆಸ್ಟ್ರೇಲಿಯಾ

5. ಅರಣ್ಯದ ಸರ್ವೋತ್ಕೃಷ್ಟ ವಿಧವಾದ `ವೃಷ್ಟಿವನ~ದ ಒಂದು ದೃಶ್ಯ ಚಿತ್ರ-5 ರಲ್ಲಿದೆ. ಈ ಪಟ್ಟಿಯಲ್ಲಿರುವ ಯಾವ ಭೂಖಂಡದಲ್ಲಿ ಕಿಂಚಿತ್ತೂ ವೃಷ್ಟಿವನ ಇಲ್ಲ?

ಅ. ಏಷಿಯ ಬ. ಅಂಟಾರ್ಕ್ಟಿಕಾ

ಕ. ಆಸ್ಟ್ರೇಲಿಯಾ ಡ. ಆಫ್ರಿಕ

6. ಆಧುನಿಕ ಮಹಾನಗರಗಳ ಪ್ರಮುಖ ಲಕ್ಷಣ ಗಗನಚುಂಬಿ ಕಟ್ಟಡಗಳು-ಸರಿ ತಾನೇ? (ಚಿತ್ರ-6) ಈ ಕೆಳಗೆ ಪಟ್ಟಿರುವ ವಿಶ್ವವಿಖ್ಯಾತ ಗಗನಚುಂಬಿಗಳು ಮತ್ತು ಅವು ನಿರ್ಮಾಣಗೊಂಡಿರುವ ನೆಲೆಗಳು-ಇವನು ಸರಿಹೊಂದಿಸಿ:

1. ಇಂಟರ್‌ನ್ಯಾಶನಲ್ ಕಾಮರ್ಸ್ 

  ಸೆಂಟರ್                       ಅ. ತೈವಾನ್

2. ಸಿಯರ್ಸ್ ಟವರ್               ಬ. ಜಪಾನ್  

3. ಬುರ್ಜ್ ಖಲಿಫಾ           ಕ. ಕೌಲಾಲಂಪುರ                         

4. ಪೆಟ್ರೋನಾಸ್ ಟವರ್ಸ್‌   ಡ. ಹಾಂಗ್‌ಕಾಂಗ್

5. ತೈಪೈ-100            ಇ. ದುಬೈ

                       ಈ. ಯು.ಎಸ್.ಎ.7. ಸುಂದರ ಶಂಕುವಿನಾಕಾರದ `ಅಗ್ನಿಪರ್ವತ~ವೊಂದರ ದೃಶ್ಯ ಚಿತ್ರ-7 ರಲ್ಲಿದೆ. ಅಗ್ನಿಪರ್ವತಗಳನ್ನು ಕುರಿತು ಈ ಹೇಳಿಕೆಗಳಲ್ಲಿ ಯಾವುದು ಸರಿ?

ಅ. ಎಲ್ಲ ಅಗ್ನಿಪರ್ವತಗಳದೂ ಒಂದೇ ಆಕಾರ-ಶಂಕುವಿನಾಕಾರ.

ಬ. ಎಲ್ಲ ಅಗ್ನಿಪರ್ವತಗಳೂ ಶಿಲಾಪಾಕವನ್ನೇ ಚಿಮ್ಮುತ್ತವೆ.

ಕ. ಸಾಗರಗಳ ನೆಲದಲ್ಲೂ ಅಗ್ನಿಪರ್ವತಗಳಿವೆ.

ಡ. ಅಗ್ನಿಪರ್ವತಗಳ ಸ್ಫೋಟದ ನಿಖರ ಮುನ್ಸೂಚನೆ ಸಾಧ್ಯವಾಗಿದೆ.

8. ಕಡಲಿನಲ್ಲಿ ಮೈದಾಳುವ, ಕಡಲ ತೀರದ ಪ್ರದೇಶಗಳಲ್ಲಿ ಸರ್ವನಾಶ ತರುವ ಅಲೆಗಳೇ (ಚಿತ್ರ-8) `ಸುನಾಮಿ~ಗಳು ಹೌದಲ್ಲ? ನಮ್ಮ ದೇಶದ ಈ ಕೆಳಗಿನ ಯಾವ ನಗರಗಳಿಗೆ `ಸುನಾಮಿ~ಯ ಭಯ ಕಿಂಚಿತ್ತೂ ಇಲ್ಲ?

ಅ. ಮುಂಬೈ           ಡ. ಚೆನ್ನೈ

ಬ. ಭೂಪಾಲ್        ಇ. ಲಕ್ನೋ

ಕ. ಶ್ರಿನಗರ            ಈ. ತಿರುವನಂತಪುರ

ಡ. ವಿಶಾಖಪಟ್ಟಣ    ಉ. ಮಂಗಳೂರು

9. ನದಿಗಳು ಪ್ರಪಂಚದ ಜೀವಧಾರೆಗಳು (ಚಿತ್ರ-9). ಬಹುಸಂಖ್ಯೆಯ ನದಿಗಳು ಒಂದಕ್ಕಿಂತ ಅಧಿಕ ರಾಷ್ಟ್ರಗಳ ಮೂಲಕ ಪ್ರವಹಿಸುತ್ತವೆ ಅಲ್ಲವೇ? ಇಲ್ಲಿ ಹೆಸರಿಸಿರುವ ನದಿಗಳಲ್ಲಿ ಯಾವುವು ಕೇವಲ ನಮ್ಮ ದೇಶದಲ್ಲಿ ಮಾತ್ರವೇ ಪ್ರವಹಿಸುತ್ತವೆ?

ಅ. ಗಂಗಾ ಬ. ಯಮುನಾ

ಕ. ಗೋದಾವರಿ ಡ. ಬ್ರಹ್ಮಪುತ್ರ

ಇ. ನರ್ಮದಾ ಈ. ಸಿಂಧೂ

ಉ. ಕಾವೇರಿ ಟ. ಕೃಷ್ಣಾ

10. ಸುಂದರ ಜಲಪಾತವೊಂದರ ಮನೋಹರ ಮನೋಹರ ದೃಶ್ಯ ಚಿತ್ರ-10 ರಲ್ಲಿದೆ. ಜಗತ್ಪ್ರಸಿದ್ಧ ಜಲಪಾತಗಳನ್ನು ಕುರಿತ ಈಕೆಲವು ಸರಳ ಪ್ರಶ್ನೆಗಳನ್ನು ಉತ್ತರಿಸಬಲ್ಲಿರಾ?

ಅ. ಪ್ರಪಂಚದ ಅತ್ಯುನ್ನತ ಜಲಪಾತ ಯಾವುದು?

ಬ. ಭಾರತದ ಅತಿ ಎತ್ತರದ ಜಲಪಾತ ಯಾವ ಸ್ಥಳದಲ್ಲಿದೆ?

ಕ. `ನಯಾಗರಾ, ವಿಕ್ಟೋರಿಯಾ, ಇಗುವಾಜು~-ಈ ಜಲಪಾತಗಳು ಯಾವ ಭೂಖಂಡಗಳಲ್ಲಿವೆ?

11. ಚಿಕ್ಕ, ಚಿತ್ತಾಕರ್ಷಕ ದ್ವೀಪವೊಂದು ಚಿತ್ರ-11 ರಲ್ಲಿದೆ. ದ್ವೀಪಗಳ ಈ ಪಟ್ಟಿಯಲ್ಲಿ ಯಾವುವು ಪ್ರತ್ಯೇಕ ರಾಷ್ಟ್ರಗಳಾಗಿವೆ ಗೊತ್ತೇ?

ಅ. ಮಡಗಾಸ್ಕರ್ ಬ. ಹವಾಯ್

ಕ. ಅಂಡಮಾನ್ ಡ. ಶ್ರಿಲಂಕಾ

ಇ. ನ್ಯೂಜಿಲ್ಯಾಂಡ್ ಈ. ಮಾರಿಷಸ್

ಉ. ತಾಸ್ಮೇನಿಯಾ

12. ನಮ್ಮ ಪ್ರಪಂಚದಲ್ಲಿ ನೈಸರ್ಗಿಕವಾಗಿ, ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಎಲ್ಲೆಡೆ ಲಭ್ಯವಿರುವ `ಅಕ್ಷಯ ಶಕ್ತಿ~ಯೊಂದನ್ನು ಸಂಗ್ರಹಿಸಿ ಒದಗಿಸುವ ಸಾಧನ ಚಿತ್ರ-12 ರಲ್ಲಿದೆ. ಆ ಅಕ್ಷಯ ಶಕ್ತಿ ಯಾವುದು?

ಅ. ಮಾರುತ ಶಕ್ತಿ ಬ. ಸೌರಶಕ್ತಿ

ಕ. ಭರತ ಶಕ್ತಿ ಡ. ಭೂ ಒಡಲಿನ ಶಾಖ ಶಕ್ತಿ

 

ಉತ್ತರಗಳು

1. ಅ-ಆಫ್ರಿಕ; ಬ-ಮಡಸ್ಕಾರ್; ಕ-ದಕ್ಷಿಣ ಆಫ್ರಿಕ.

2. ಅ-ಅಮೆಜಾನ್; ಬ-ಅಮೆಜೋನಿಯಾ; ಕ-ಆ್ಯಂಡಿಸ್.

3. ಬ-ಚಿಲಿ

4. ಡ-ಆಸ್ಟ್ರೇಲಿಯಾ.

5. ಬ- ಅಂಟಾರ್ಕ್ಟಿಕಾ.

6. 1-ಡ; 2-ಈ; 3-ಇ; 4-ಕ; 5-ಅ.

7. `ಕ~ ಸರಿ.

8. ಬ, ಕ ಮತ್ತು ಇ.

9. ಬ,ಕ,ಇ,ಉ,ಟ.

10. ಅ-ಏಂಜಲ್; ಬ-ಜೋಗ; ಕ-ಕ್ರಮವಾಗಿ ಉತ್ತರ ಅಮೆರಿಕ; ಆಫ್ರಿಕ, ದಕ್ಷಿಣ ಅಮೆರಿಕ.

11. ಅ,ಡ, ಇ ಮತ್ತು ಈ.

12. ಬ-ಸೌರಶಕ್ತಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.