ಪ್ರಪಾತಕ್ಕೆ ಬಿದ್ದು ಬದುಕಿ ಉಳಿದ ರಷ್ಯನ್‌ ಪ್ರಜೆ

7

ಪ್ರಪಾತಕ್ಕೆ ಬಿದ್ದು ಬದುಕಿ ಉಳಿದ ರಷ್ಯನ್‌ ಪ್ರಜೆ

Published:
Updated:

ಕುಮಟಾ (ಉ.ಕ.ಜಿಲ್ಲೆ): ತಾಲ್ಲೂಕಿನ ಗೋಕರ್ಣದ ರಾಮತೀರ್ಥ ಗುಡ್ಡದಿಂದ 80 ಅಡಿ ಆಳಕ್ಕೆ ಆಕಸ್ಮಿಕವಾಗಿ ಬಿದ್ದ 71 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಪಾರಾಗಿ ಬಂದ ಪ್ರಸಂಗ ಭಾನುವಾರ ನಡೆದಿದೆ.ಪ್ರಾಣಾಪಾಯದಿಂದ ಪಾರಾದ ವ್ಯಕ್ತಿಯನ್ನು ರಷ್ಯನ್‌ ಪ್ರಜೆ ಗೋವರ್‌ (71) ಎಂದು ಗುರುತಿಸಲಾಗಿದೆ.ಇವರು ರಾಮತೀರ್ಥ ಗುಡ್ಡದ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾಲು ಜಾರಿ 80 ಅಡಿ ಆಳದ ಪ್ರಪಾತಕ್ಕೆ ಬಿದ್ದಿದ್ದರು. ಆದರೂ ಏನೂ ಆಗದ ಗೋವರ್ ಮೊಬೈಲ್‌ ಮೂಲಕ ವಸತಿಗೃಹದಲ್ಲಿದ್ದ ತನ್ನ ಗೆಳತಿಗೆ ವಿಷಯ ತಿಳಿಸಿದ್ದಾರೆ.ತಕ್ಷಣವೇ ಗೆಳತಿಯು ವಸತಿಗೃಹದ ಮಾಲೀಕ ಮಾರುತಿ ನಾಯಕ ಅವರಿಗೆ ವಿಷಯ ತಿಳಿಸಿದರು.  ಪಿಎಸ್‌ಐ ವಸಂತ ಬಂಡಗಾರ ನೇತೃತ್ವದ ತಂಡದವರು ಸ್ಥಳಕ್ಕೆ ಧಾವಿಸಿ ಹಗ್ಗದ ಸಹಾಯದಿಂದ ಗೋವರ್‌ ಅವರನ್ನು ಮೇಲೆತ್ತಿದರು.ಪ್ರಪಾತದಲ್ಲಿ ಮೂರು ತಾಸು ಹೋರಾಟ ನಡೆಸಿ ಸಣ್ಣಪುಟ್ಟ ಗಾಯಗಳಾಗಿದ್ದ ಗೋವರ್‌ ಅವರಿಗೆ ಚಿಕಿತ್ಸೆ ಕೊಡಿಸಿ ವಸತಿಗೃಹಕ್ಕೆ ಕಳುಹಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry