ಗುರುವಾರ , ಮೇ 19, 2022
20 °C

ಪ್ರಫುಲ್ಲಾ- ಚಿಕ್ಕಮಗಳೂರು ಜಿ.ಪಂ. ಅಧ್ಯಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಇದೇ ಮೊದಲು ಬಾರಿಗೆ ಜಿಲ್ಲಾ ಪಂಚಾಯಿತಿ ಆಡಳಿತ ಚುಕ್ಕಾಣಿ ಹಿಡಿದಿದ್ದು, ಅಧ್ಯಕ್ಷರಾಗಿ ದೇವನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಪ್ರಫುಲ್ಲಾ ಮಂಜುನಾಥ್ ಮತ್ತು ಉಪಾಧ್ಯಕ್ಷರಾಗಿ ಶೃಂಗೇರಿ ಕಸಬಾ ಕ್ಷೇತ್ರದ ರಂಗನಾಥ್ ಗುರುವಾರ ಅವಿರೋಧವಾಗಿ ಆಯ್ಕೆಯಾದರು. ಇಬ್ಬರೂ ತಲಾ 2 ಪ್ರತಿ ನಾಮಪತ್ರ ಸಲ್ಲಿಸಿದ್ದರು. ಪ್ರಫುಲ್ಲಾ ಅವರ ನಾಮಪತ್ರಕ್ಕೆ ಸದಸ್ಯೆ ರೇಖಾ ಹುಲಿಯಪ್ಪ ಗೌಡ, ಶಿವಶಂಕರ ಹಾಗೂ ರಂಗನಾಥ್ ಅವರ ನಾಮಪತ್ರಕ್ಕೆ ಜೆ.ಡಿ.ಲೋಕೇಶ್, ಎಂ.ಎಸ್.ನಿರಂಜನ್ ಸೂಚಕರಾಗಿದ್ದರು.ಮೈಸೂರು ವಿಭಾಗೀಯ ಆಯುಕ್ತರಾದ ಜಯಂತಿ ಅವರು ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.ವಿಭಾಗೀಯ ಸಹಾಯಕ ಆಯುಕ್ತ ಮಂಜುನಾಥ ನಾಯಕ, ಹೆಚ್ಚುವರಿ ಜಿಲ್ಲಾಧಿಕಾರಿ ಸುಬ್ಬರಾಯ ಕಾಮತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಮಣ್ಣ, ಉಪ ಕಾರ್ಯದರ್ಶಿ ಹಿಮವಂತ ಗೋಪಾಲ್ ಇದ್ದರು.ಮುಂದಿನ ಬದಲಾವಣೆ: 10 ತಿಂಗಳ ನಂತರ ಎರಡನೇ ಅವಧಿಗೆ ಹರಿಹರಪುರ ಕ್ಷೇತ್ರದ ಸುಚಿತಾ ನರೇಂದ್ರ ಮತ್ತು ಶಿವನಿ ಕ್ಷೇತ್ರದ ಎಸ್.ಬಿ.ಆನಂದಪ್ಪ ಅವರು ಅನುಕ್ರಮವಾಗಿ ಅಧ್ಯಕ್ಷ- ಉಪಾ ಧ್ಯಕ್ಷ ಗಾದಿ ಅಲಂ ಕರಿಸುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.